Hilliard
25
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಸುಮಲತಾ ಆಪ್ತ ಸಚ್ಚಿದಾನಂದ ಬಿಜೆಪಿಗೆ ಸೇರ್ಪಡೆ

ಬೆಂಗಳೂರು: ಆಪರೇಷನ್ ಕಮಲ ಆರಂಭಿಸಿರುವ ಬಿಜೆಪಿ ನಾಯಕರು ಸತತ ಪ್ರಯತ್ನದ ಬಳಿಕ ಅಂತಿಮವಾಗಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಆಪ್ತ ಸಚ್ಚಿದಾನಂದ ಸೇರಿ ಮಂಡ್ಯದ ಪ್ರಮುಖ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಸುಮಲತಾರನ್ನು ಸೇರಿಸಿಕೊಳ್ಳುವ ಮೊದಲಿನ ಭಾಗವಾಗಿ ಈ ಆಪರೇಷನ್ ನಡೆದಿದೆ ಎನ್ನಲಾಗುತ್ತಿದೆ.
ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುಮಲತಾ ಆಪ್ತ ಇಂಡುವಾಳು ಸಚ್ಚಿದಾನಂದ, ನಾಗಮಂಗಲದ ರವಿ, ಶ್ರೀರಂಗಪಟ್ಟಣದ ಲಿಂಗರಾಜು ಬಿಜೆಪಿ ಸೇರ್ಪಡೆಯಾದರು.

ಪಕ್ಷದ ಭಾವುಟ ಮತ್ತು ಶಾಲು ಹೊದಿಸಿ ಸಚಿವ ಅಶ್ವತ್ಥ ನಾರಾಯಣ್, ಕೆ.ಗೋಪಾಲಯ್ಯ, ನಾರಾಯಣ ಗೌಡರು, ಸಿಪಿ ಯೋಗೇಶ್ವರ್​, ನಿರ್ಮಲ್ ಕುಮಾರ್ ಸುರಾನ, ಶಾಸಕ ಸತೀಶ್ ರೆಡ್ಡಿ, ರವಿ ಸುಬ್ರಹ್ಮಣ್ಯ ಅವರು ಮಂಡ್ಯ ನಾಯಕರಿಗೆ ಸ್ವಾಗತ ಕೋರಿ ಪಕ್ಷಕ್ಕೆ ಬರಮಾಡಿಕೊಂಡರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ