ಮೈಸೂರು: ಜಿಲ್ಲಾ ಪತ್ರಕರ್ತರ ಸಂಘ, ಬೆಂಗಳೂರಿನ ಶ್ರೀ ಜಯತೀರ್ಥ ಪಬ್ಲಿಕೇಷನ್ಸ್‌ನ ಆಶ್ರಯದಲ್ಲಿ ಹಿರಿಯ ಪತ್ರಕರ್ತ ಡಾ.ಕೂಡ್ಲಿ ಗುರುರಾಜ ಅವರು ಬರೆದಿರುವ ಸುಧರ್ಮಾ(ಐದು ದಶಕ ಕಂಡ ಜಗತ್ತಿನ ಏಕೈಕ ಸಂಸ್ಕೃತ ದಿನಪತ್ರಿಕೆ) ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಸಂಘದ ಸಭಾಂಗಣದಲ್ಲಿ ನ.೭ರಂದು ಬೆಳಿಗ್ಗೆ ೧೧ ಗಂಟೆಗೆ ಆಯೋಜಿಸಲಾಗಿದೆ..

ಅಂಕಣಕಾರ ಎಚ್.ಆರ್.ಶ್ರೀಶ ಕೃತಿ ಬಿಡುಗಡೆ ಮಾಡುವರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಕಂ.ಕ.ಮೂರ್ತಿ ಕೃತಿ ಕುರಿತು ಮಾತನಾಡುವರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಅಧ್ಯಕ್ಷತೆ ವಹಿಸುವರು.

ಸುಧರ್ಮಾ ಪತ್ರಿಕೆ ಸಂಪಾದಕರಾದ ಜಯಲಕ್ಷ್ಮೀ, ಕೃತಿ ಕರ್ತೃ ಕೂಡ್ಲಿ ಗುರುರಾಜ ಹಾಜರಿರುವರು.





