Mysore
25
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ವಿದ್ಯಾರ್ಥಿಗಳು ಇರುವ ಸವಲತ್ತು ಬಳಸಿ ಅಪರಿಮಿತ ಸಾಧನೆ ಮಾಡಬೇಕು : ಮಂಜುಳಾ ಮಾನಸ

ಮೈಸೂರು : ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾರ್ಥಿಗಳು ಇರುವ ಮಿತ ಸವಲತ್ತುಗಳನ್ನು ಬಳಸಿಕೊಂಡು ಅಪರಿಮಿತ ಸಾಧನೆ ಮಾಡಬೇಕು ಎಂದು ಮೈಸೂರಿನ ಪ್ರಸಿದ್ಧ ವಕೀಲರು ಹಾಗೂ ಮೈಸೂರು ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕಿನ ಅಧ್ಯಕ್ಷರು ಆದ  ಮಂಜುಳಾ ಮಾನಸ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮೈಸೂರಿನ ರೂಪಾನಗರದ ದೀಪಾ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಸರಸ್ವತಿ ಶಾರದಾ ಪೂಜಾ ಕಾರ್ಯಕ್ರಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆಯ ಸಮಾರಂಭವನ್ನು ಉದ್ಘಾಟಿಸಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಮೂವತ್ತು ವರ್ಷಗಳ ಹಿಂದಿನ ಕಾಲಘಟ್ಟದಲ್ಲಿ ಓದಲು ಆಗದ ಪರಿಸ್ಥಿತಿಗಳಲ್ಲಿ ಶ್ರದ್ಧೆಯಿಂದ ಕಲಿತವರು ಮುಂದೆ ಬಂದಿದ್ದಾರೆ, ಅದಕ್ಕೆ ನಮ್ಮಂತೆ ಇರುವ ಅನೇಕ ನಿದರ್ಶನಗಳಿವೆ.
ವಿನಯದಿಂದ ಶ್ರದ್ಧೆಯಿಂದ ಕಲಿಯದೇ ಉಳಿದವರ ಬದುಕು ಇತರರಿಗೆ ಹೇಗೆ ಪಾಠವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಿಮ್ಮ ಜೊತೆ ನೀವು ಮಾತನಾಡಬೇಕು, ಅದಕ್ಕೆ ದಿನದಲ್ಲಿ ಒಂದಷ್ಟು ಸಮಯವನ್ನು ಮೀಸಲಿಡಬೇಕು, ಆಗ ಮಾತ್ರ ನಿಮ್ಮೊಳಗಿನ ಅಂತರಂಗವು ಬಾಹ್ಯ ಪ್ರಪಂಚದಲ್ಲಿ ಲೀನವಾಗುತ್ತದೆ.
ಈ ಅಭ್ಯಾಸ ಮೊದಲಿಗೆ ಕಷ್ಟವಾದರೂ ನಂತರ ರೂಢಿಯಾಗುತ್ತದೆ. ಹೀಗೆ ಏಕಾಗ್ರತೆಯಿಂದ ಸಾಧಿಸಿದರೆ ನಿಮ್ಮನ್ನು ತಡೆಯುವವರು ಯಾರು ಎಂದು ತಿಳಿಸಿದರು.
ನಾವು ಪ್ರತಿದಿನ ಬೆಳಿಗ್ಗೆ ಬೇಗ ಎದ್ದು,  ನಿನ್ನೆ ಕಳೆದುಹೋಯಿತು, ನಾಳೆ ಹೇಗೋ ಗೊತ್ತಿಲ್ಲ, ಇಂದು ಮಾತ್ರ ನಮ್ಮದು ಎಂದು ಪ್ರಾರ್ಥನೆ ಸಲ್ಲಿಸಿ ಧನಾತ್ಮಕವಾಗಿ ಯೋಚಿಸಿ ಮುಂದೆ ಗುರುತರ ಸಾಧನೆ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ದೀಪಾ ಶಿಕ್ಷಣ ಮತ್ತು ಸೇವಾ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಎಂ ರಾಮಪ್ಪ ಅವರು ಮಾತನಾಡುತ್ತಾ “ಈ ಮುನ್ನ ಸಾಧನೆ ಮಾಡಿರುವವರನ್ನು ಮಾದರಿಯಾಗಿಟ್ಟುಕೊಂಡು ನಾವು ಕಾರ್ಯೋನ್ಮುಖರಾಗಬೇಕು.
ಪ್ರಸ್ತುತ ಸಂದರ್ಭದಲ್ಲಿ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ನಾವೇ ಪುಣ್ಯವಂತರು. ಅವುಗಳನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಲು ಮುಂದಾಗಬೇಕು. ಎಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಮುಂದಿನ ವ್ಯಾಸಂಗಕ್ಕೆ ಸಿದ್ಧರಾಗಿ ಎಂದು ತಿಳಿಸಿದರು.
ಜೊತೆಗೆ ಪೋಷಕರು ತಮ್ಮ ಮಕ್ಕಳ ಬಗ್ಗೆ ಅವರ ನಡೆನುಡಿಗಳ ಕುರಿತು ಕಾಳಜಿಯನ್ನು ವಹಿಸಬೇಕು ಎಂದು ಹೇಳಿದರು. ಹೆಚ್ಚಿನದಾಗಿ ಆರೋಗ್ಯದ ಕಡೆ ಗಮನ ಹರಿಸಿ ಪರೀಕ್ಷೆ ಭಯವನ್ನ ಬಿಟ್ಟು ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಗಳಿಸಬೇಕು ಎಂದು ಕರೆನೀಡಿದರು. ಇದೇ ವೇಳೆ ಶ್ರೀಮತಿ ಮಂಜುಳಾ ಮಾನಸ ಅವರನ್ನು ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು.
ಜಿನ ಪ್ರಾಂಶುಪಾಲರಾದ ಶ್ರೀಮತಿ ಪ್ರಣೀತ ಎರ್ಮಾಳ್, ದೀಪಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಗೀತಾ ಹೆಚ್ ರವರು ಹಾಗೂ ದೀಪಾ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಬಾಬು ಎ ಕೆ ಹಾಗೂ ದೀಪಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶಿಲ್ಪಾ ಅವರು ಭಾಗವಹಿಸಿದ್ದರು. ಸಮಾರಂಭದಲ್ಲಿ ಕಾಲೇಜಿನ ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.
Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ