ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ ಜಿಲ್ಲಾ ಪಂಚಾಯಿತಿ ಹೋಬಳಿಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿನ ಬೀದಿನಾಯಿಗಳಿಗೆ ಡಬ್ಲ್ಯು ವಿ ಎಸ್ ಸಂಸ್ಥೆಯವರು ಬೀದಿನಾಯಿ ಹಾವಳಿ ತಡೆಯುವ ನಿಟ್ಟಿನಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆ ನೀಡಿದ್ದಾರೆ.
ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಪಿ ಜಿ ಪಾಳ್ಯ, ಹುತ್ತೂರು, ಒಡೆಯರಪಾಳ್ಯ,ಲೊಕ್ಕನಹಳ್ಳಿ ಜೀರಿಗೆಗದ್ದೆ ಉದ್ದಟ್ಟಿ ಹಾವಿನಮೂಲೆ ಮಾವತ್ತೂರು ಹೊಸದೊಡ್ಡಿ ಜಡೇಗೌಡನದೊಡ್ಡಿ ಕೇಕೆ ಡ್ಯಾಮ್ ಆಂಡಿಪಾಳ್ಯ ಹಿರಿಯಂಬಲ ಹೊಸಪೋಡು ಗುಂಡಿಮಾಳ ಬಸವನಗುಡಿ ಕೊರಮನಕತ್ತರಿ ಗ್ರಾಮಗಳಲ್ಲಿನ 600 ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಟಿಬೆಟಿಯನ್ ಸೆಟ್ಲ್ ಮೆಂಟ್ ಆಸ್ಪತ್ರೆಯಲ್ಲಿ ಸಂತಾನಹರಣ ಚಿಕಿತ್ಸೆ ನೀಡಿ ನಂತರ ಅದೇ ಗ್ರಾಮಗಳಿಗೆ ಬಿಟ್ಟಿದ್ದಾರೆ.
ಈ ವೇಳೆ ಪಿ ಜಿ ಪಾಳ್ಯ ಗ್ರಾಪಂ ಮಾಜಿ ಅಧ್ಯಕ್ಷ ಎನ್ ಕೃಷ್ಣಮೂರ್ತಿ ಮಾತನಾಡಿ ಬೀದಿ ನಾಯಿಗಳ ಹಾವಳಿಯನ್ನು ತಡೆಯುವ ನಿಟ್ಟಿನಲ್ಲಿ ಡಬ್ಲ್ಯು ವಿ ಎಸ್ ಸಂಸ್ಥೆಯವರು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುತ್ತಿರುವದು ಸಂತಸದ ವಿಚಾರ ,ಇವರು ಒಳ್ಳೆಯ ದೃಷ್ಟಿಯಿಂದ ನಾಯಿಗಳನ್ನು ಹಿಡಿದು ಚಿಕಿತ್ಸೆ ಮುಗಿದ ನಂತರ ಮತ್ತೆ ಅದೇ ಗ್ರಾಮಕ್ಕೆ ಬಿಡುತ್ತಿದ್ದಾರೆ ಇದರಿಂದ ಸಾರ್ವಜನಿಕರು ಸಂಸ್ಥೆಯವರ ಜತೆ ಸಹಕರಿಸಬೇಕು. ಸಂತಾನ ತಡೆಯುವ ನಿಟ್ಟಿನಲ್ಲಿ ಮನೆಯಲ್ಲಿ ಸಾಕುತ್ತಿರುವ ಸಾಕು ನಾಯಿಗಳಿಗೂ ಸಹ ಚಿಕಿತ್ಸೆ ಕೊಡಿಸಬಹುದು ಎಂದು ತಿಳಿಸಿದರು.





