ಮೈಸೂರು : ನಾಳೆಯಿಂದ ಆರಂಭವಾಗಲಿರುವ ಶ್ರೀರಂಗಪಟ್ಟಣದ ದಸರೆಯಲ್ಲಿ ಮಹೇಂದ್ರ ನೇತೃತ್ವದಲ್ಲಿ ಮೂರು ಆನೆಗಳು ಭಾಗವಹಿಸಲಿದ್ದು, ನಾಳೆ ಶ್ರೀರಂಗಪಟ್ಟಣ ದಸರಾಗೆ ಸಾಂಪ್ರದಾಯಿಕವಾದ ಚಾಲನೆ ದೊರೆಯಲಿದೆ. ಇಂದು ಆನೆ ಮಹೇಂದ್ರನೊಟ್ಟಿಗೆ ಮೂರು ಆನೆಗಳು ಶ್ರೀರಂಗಪಟ್ಟಣಕ್ಕೆ ತೆರಳಿವೆ.
ಶ್ರೀರಂಗಪಟ್ಟಣ ದಸರಾ ನಾಳೆಮಧ್ಯಾಹ್ನ 3 ಗಂಟೆಗೆ ಜರುಗಲಿದೆ. ಮಹೇಂದ್ರನೊಟ್ಟಿಗೆ ಕಾವೇರಿ,ವಿಜಯ ಆನೆಗಳು ಭಾಗವಹಿಸಲಿವೆ. ದಸರಾವು ನಾಳೆಯಿಂದ ಅ.2 ರವರೆಗೆ ನಡೆಯಲಿದೆ.
280 ಕೆಜಿ ತೂಕದ ಮರದ ಅಂಬಾರಿಯಲ್ಲಿ ದೇವಿ ವಿಗ್ರಹವನ್ನು ಇಟ್ಟು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಗುತ್ತದೆ. ನಾಳೆ ದಸರಾಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ ಸುತ್ತೂರು ಮಹಾಸಂಸ್ಥಾನದ ಮಠಾಧೀಶರಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳಿಗೆ ಆಹ್ವಾನ ನೀಡಲಾಗಿದೆ.





