ಹನೂರು: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕಣ್ಣೂರು ಗ್ರಾಮದಲ್ಲಿ ಉಚಿತವಾಗಿ ಆಯುಷ್ಮಾನ್ ಆರೋಗ್ಯ ಕಾರ್ಡ್ ಹಾಗೂ ಇ ಶ್ರಮ್ ಕಾರ್ಡ್ ಗಳನ್ನು ನೋಂದಣಿ ಮಾಡಲಾಯಿತು.
ಧರ್ಮಸ್ಥಳ ಸಂಸ್ಥೆಯ ಪರಶಿವಮೂರ್ತಿ ಮಾತನಾಡಿ ಪ್ರತಿ ಗ್ರಾಮ ಮಟ್ಟದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು (CSC ಕೇಂದ್ರ) ಸಾಮಾನ್ಯ ಸೇವಾ ಕೇಂದ್ರ ತೆರೆದು ಕೇಂದ್ರ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಜನರಿಗೆ ತಲುಪಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಗಳಾದ ಶ್ರೀಕಂಠಮೂರ್ತಿ , ಪಿಡಿಓ ವೈರಮಾಣಿಕ್ಯಂ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಆಶಾರಾಣಿ, ಪ್ರತಿಮಾ , ಆಶಾ ಕಾರ್ಯಕರ್ತೆಯರಾದ ರಾಜೇಶ್ವರಿ, ನಿರ್ಮಲ, ಶೋಭಾ, ಪ್ರೇಮ, ಶೇಖರ್, ಗಗನ, ನಿರೋಷ, ಮುಖಂಡರುಗಳಾದ ನಿಂಗರಾಜು, ಬಸವರಾಜು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.





