ವೈದ್ಯರು, ಉಪಕರಣಗಳ ಸಮಸ್ಯೆಯಿಂದ ಜನಸವಾನ್ಯರಿಗೆ ದೊರಕದ ಅಗತ್ಯ ಸೇವೆ; ಸಮಸ್ಯೆ ಬಗೆಹರಿಸಲು ಒತ್ತಾಯ
ವರದಿ: ಲಕ್ಷ್ಮೀಕಾಂತ್ ಕೋಮಾರಪ್ಪ
ಸೋಮವಾರಪೇಟೆ: ಪಟ್ಟಣ, ಗ್ರಾಮೀಣ ಪ್ರದೇಶಗಳ ಎಲ್ಲ ವರ್ಗಗಳ ರೋಗಿಗಳಿಗೆ ಆಸರೆಯಾಗಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಗತ್ಯವಾಗಿ ಇರಬೇಕಾದ ವೈದ್ಯರು ಹಾಗೂ ಉಪಕರಣಗಳ ಕೊರತೆಯಿಂದ ನಲುಗುತ್ತಿದೆ. ಇರುವ ವೈದ್ಯರು ಶಕ್ತಿ ಮೀರಿ ಕರ್ತವ್ಯ ನಿರ್ವಹಿಸುತಿದ್ದು, ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಕಳಿಸುವ ಪರಿಸ್ಥಿತಿ ಇಲ್ಲಿಯದ್ದು.
ಹೊರ ನೋಟಕ್ಕೆ ಸಾರ್ವಜನಿಕ ಆಸ್ಪತ್ರೆ ಉತ್ತಮ ಕಟ್ಟಡವನ್ನು ಹೊಂದಿದ್ದು, ಖಾಸಗಿ ನರ್ಸಿಂಗ್ ಹೋಂನಂತೆ ಕಾಣುತ್ತದೆ. ಆದರೆ ಆಧುನಿಕ ವೈದ್ಯಕೀಯ ಉಪಕರಣಗಳು ಮಾತ್ರ ಕೊಠಡಿಗಳಲ್ಲಿ ತುಕ್ಕು ಹಿಡಿಯುತ್ತಿವೆ. ಉಪಕರಣಗಳನ್ನು ಉಪಯೋಗಿಸಲು ಈ ಆಸ್ಪತ್ರೆಯಲ್ಲಿ ತಜ್ಞ ವೈದ್ಯರುಗಳೇ ಇಲ್ಲ.
ಶಸ್ತ್ರಚಿಕಿತ್ಸಕರು, ಆಡಳಿತ ವೈದ್ಯಾಧಿಕಾರಿಗಳೂ ಇಲ್ಲ. ಮಕ್ಕಳ ತಜ್ಞರು, ಅರಿವಳಿಕೆ ತಜ್ಞರು, ರೇಡಿಯಾಲಜಿಸ್ಟ್, ಕ್ಯಾಶುವಾಲಿಟಿ ಮೆಡಿಕಲ್ ಆಫೀಸರ್‌ಗಳ ಹುದ್ದೆಗಳು ಈ ಆಸ್ಪತ್ರೆಗೆ ಮಂಜೂರಾಗಿದ್ದರೂ ಅಂತಹ ವೈದ್ಯರ ನೇಮಕಾತಿಯೂ ಆಗಿಲ್ಲ.
ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇರುವ ವೈದ್ಯರಿಗೆ ಕರ್ತವ್ಯದ ಭಾರವೂ ಅಧಿಕವಾಗಿದೆ. ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಿಲ್ಲದ ಕಾರಣ ಸಣ್ಣಪುಟ್ಟ ಶಸ್ತ್ರಚಿಕಿತ್ಸೆಗಳನ್ನು ಹೊರತುಪಡಿಸಿ ಇನ್ನಿತರ ಶಸ್ತ್ರ ಚಿಕಿತ್ಸೆಗಳಿಗೆ ಮೈಸೂರು, ಮಂಗಳೂರು, ಬೆಂಗಳೂರು, ಹಾಸನದ ಆಸ್ಪತ್ರೆಗಳಿಗೆ ರೋಗಿಗಳು ತೆರಳಬೇಕಿದೆ. ಸಣ್ಣಮಟ್ಟದಲ್ಲಿ ಅವಘಡಗಳಾದರೆ ಮಡಿಕೇರಿಗೆ ಶಿಫಾರಸು ವಾಡುವುದು ಮಾಮೂಲಾಗಿದೆ. ತಾಲ್ಲೂಕು ಕೇಂದ್ರದಲ್ಲಿರುವ ಆಸ್ಪತ್ರೆಯನ್ನು ಇನ್ನಷ್ಟು ಸುಧಾರಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಇತ್ತೀಚೆಗೆ ಸಾರ್ವಜನಿಕ ವಲಯಗಳಲ್ಲಿ ಕೇಳಿರುತ್ತಿದೆ.
ಕೃಷಿಕರು, ಕೂಲಿ ಕಾರ್ಮಿಕರು, ಮಕ್ಕಳು ಸೇರಿದಂತೆ ದಿನವೊಂದಕ್ಕೆ ಸರಾಸರಿ ೩೦೦ರಷ್ಟು ರೋಗಿಗಳು ಈ ಆಸ್ಪತ್ರೆಗೆ ಬರುತ್ತಾರೆ. ಈ ಆಸ್ಪತ್ರೆಯಲ್ಲಿ ೧೨೦ ಹಾಸಿಗೆಗಳನ್ನು ಒಳರೋಗಿಗಳಿಗೆ ಕಲ್ಪಿಸಲಾಗಿದೆ. ಎಕ್ಸರೇ, ಇಸಿಜಿ ಕೆಲಸ ನಿರ್ವಹಿಸುವ ಸ್ಥಿತಿಯಲ್ಲಿದ್ದು, ಸ್ಕ್ಯಾನಿಂಗ್ ವ್ಯವಸ್ಥೆ ಇಲ್ಲದೆ ಮಡಿಕೇರಿ ಅಥವಾ ಹಾಸನಕ್ಕೆ ತೆರಳಬೇಕಾಗಿದೆ. ಜಿಲ್ಲೆಯ ಇತರ ತಾಲ್ಲೂಕು ಆಸ್ಪತ್ರೆಗಳಿಗೆ ಹೋಲಿಸಿದರೆ ಸೋಮವಾರಪೇಟೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿದ್ದರೂ, ವೈದ್ಯರಿಲ್ಲ, ಉಪಕರಣಗಳಿಲ್ಲ ಎಂಬುದೇ ವಿಪರ್ಯಾಸ.
ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಸಮರ್ಪಕವಾಗಿ ನೆರವು ಸಿಗುತ್ತಿಲ್ಲ. ಐಸಿಯು ಯೂನಿಟ್‌ಗೆ ಪರಿಕರಗಳಿದ್ದರೂ ವೈದ್ಯರಿಲ್ಲ. ದೇಹದಲ್ಲಿ ಗಂಟು, ಸಿಸೇರಿಯನ್, ಅಪೆಂಡಿಕ್ಸ್, ಹರ್ನಿಯಾಗಳಂತಹ ಕಾಯಿಲೆಗಳಿಗೆ ಮಾತ್ರ ಇಲ್ಲಿ ಶಸ್ತ್ರಚಿಕಿತ್ಸೆ ಮಾಡುತ್ತಿದ್ದು, ಉಳಿದ ಕಾಯಿಲೆಗಳಿಗೆ ಹೊರ ಭಾಗದ ಆಸ್ಪತ್ರೆಗಳಿಗೆ ತೆರಳಬೇಕಾದ ಅನಿವಾರ್ಯ ವಾಗಿದೆ. ಡಾಂಲಿಸಿಸ್ ಘಟಕದಲ್ಲಿ ದಿನಕ್ಕೆ ಮೂರು ಶಿಫ್ಟ್‌ಗಳಂತೆ ೧೫ ಮಂದಿ ಚಿಕಿತ್ಸೆಗೆ ಒಳಪಡುತ್ತಿದ್ದಾರೆ.
ತಾಲ್ಲೂಕು ಕೇಂದ್ರದಲ್ಲಿರುವ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಗಳ ಸುಧಾರಣೆಯತ್ತ ಸರ್ಕಾರ ಗಮನ ಹರಿಸಬೇಕಿದೆ. ಐಸಿಯು ಹಾಗೂ ಸ್ಕ್ಯಾನಿಂಗ್ ಘಟಕವನ್ನು ಕಾರ್ಯ ಆರಂಭಿಸಬೇಕಿದೆ. ಅರಿವಳಿಕೆ ತಜ್ಞರನ್ನು ನೇಮಿಸಿ ಶಸ್ತ್ರ ಚಿಕಿತ್ಸೆಯ ಸೇವೆ ನೀಡಬೇಕಿದೆ. ಮೂಳೆಗಳ ಶಸ್ತ್ರ ಚಿಕಿತ್ಸೆ ಹಾಗೂ ಕಣ್ಣಿನ ಚಿಕಿತ್ಸೆಗೂ ಉಪಕರಣಗಳನ್ನು ನೀಡಬೇಕಿದೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸರ್ಕಾರದ ಗಮನ ಸೆಳೆಯಬೇಕಿದೆ.
ಕೆಲವು ಕಾಯಿಲೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಮಡಿಕೇರಿ, ಮೈಸೂರು, ಹಾಸನ ಮಂಗಳೂರಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ತಾಲ್ಲೂಕು ಆಸ್ಪತ್ರೆಗೆ ತಜ್ಞವೈದ್ಯರ ನೇಮಕಕ್ಕೆ ಸರ್ಕಾರ ತುರ್ತಾಗಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಆಸ್ಪತ್ರೆ ಆವರಣದ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದು, ತುರ್ತು ವಾಹನ ಚಲಿಸಲು ಕಷ್ಟಕರವಾಗಿದೆ. ಅದರಿಂದ ಕೂಡಲೇ ಸೆಕ್ಯೂರಿಟಿಯನ್ನು ನಿಯೋಜಿಸಬೇಕು. -ಎಸ್.ಮಹೇಶ್, ಸದಸ್ಯರು, ಕೊಡಗು ಜಿಲ್ಲಾ ಕನ್ನಡ ಜಾಗೃತಿ ಸಮಿತಿ
ಕೃಷಿಕರು, ಕೂಲಿಕಾರ್ಮಿಕರು ಅಧಿಕವಾಗಿರುವ ಈ ಭಾಗದಲ್ಲಿ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸುವ ಕೆಲಸ ಮಾಡಬೇಕಿದೆ. ಅಪಘಾತ ಸೇರಿದಂತೆ ಕೆಲವು ತುರ್ತು ಸಂದರ್ಭಕ್ಕೆ ವೈದ್ಯರು ದೊರಕದೆ ಪ್ರಾಣಹಾನಿ ಕೂಡ ಸಂಭವಿಸಿದೆ. ಸರ್ಕಾರ ಹಾಗೂ ಅಧಿಕಾರಿಗಳು ಕೂಡಲೇ ಗಮನಹರಿಸಿ ಜನಸಾವಾನ್ಯರ ಸಮಸ್ಯೆಯನ್ನು ಬಗೆಹರಿಸಬೆಕಾಗಿದೆ. -ದೀಪಕ್, ಅಧ್ಯಕ್ಷರು, ಕರವೇ ಸೋಮವಾರಪೇಟೆ.
ಸೋಮವಾರಪೇಟೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಇರುವ ವೈದ್ಯರ ತಂಡ ಉತ್ತಮ ಸೇವೆ ನೀಡುತ್ತಿದೆ. ಆದರೆ, ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಸಮರ್ಪಕವಾಗಿ ನೆರವು ನೀಡಲು ಸರಿಯಾದ ಉಪಕರಣಗಳು ಇಲ್ಲ. ಸ್ಕ್ಯಾನಿಂಗ್ ಯಂತ್ರವಿದ್ದರೂ ವೈದ್ಯರಿಲ್ಲದೆ ಸಣ್ಣಪುಟ್ಟ ನೋವಿದ್ದರೂ ಮಡಿಕೇರಿಗೆ ತೆರಳಬೇಕಿದೆ. ಐಸಿಯು ಯೂನಿಟ್‌ಗೆ ಪರಿಕರಗಳಿದ್ದರೂ ವೈದ್ಯರಿಲ್ಲ. -ಎಂ.ಎ. ರುಬೀನಾ, ಸವಾಜ ಸೇವಕಿ, ಸೋಮವಾರಪೇಟೆ