Mysore
16
overcast clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಸಮಾಜ ಸೇವಕ ನಿಶಾಂತ್ ಜೊತೆ ಗುರುತಿಸಿಕೊಂಡ ಜೆಡಿಎಸ್ ಮುಖಂಡರುಗಳು

ಹನೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜೆಡಿಎಸ್ ಮುಖಂಡರುಗಳು ಸಮಾಜಸೇವಕ ನಿಶಾಂತ್ ಬಣದಲ್ಲಿ ಗುರುತಿಸಿಕೊಳ್ಳುವ ಮೂಲಕ ಜೆಡಿಎಸ್ ಮುಖಂಡ ಎಂ ಆರ್ ಮಂಜುನಾಥ್ ಅವರಿಗೆ ಶಾಕ್ ನೀಡಿದ್ದಾರೆ.

ಹನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಗಳು ಮುಖಂಡರುಗಳು ಅನ್ಯ ಪಕ್ಷದತ್ತ ವಲಸೆ ಹೋಗುತ್ತಿರುವುದು ಸಹಜ ಆದರೆ ಜೆಡಿಎಸ್ ಮುಖಂಡ ಎಂ ಆರ್ ಮಂಜುನಾಥ್ ರವರ ಪಕ್ಷ ಸಂಘಟನೆ ಮೆಚ್ಚಿ ಕ್ಷೇತ್ರಾದ್ಯಂತ ನೂರಾರು ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಯಾಗುತ್ತಿದ್ದಾರೆ.

ಆದರೆ ಕಳೆದ 2ದಿನಗಳ ಹಿಂದೆ ನಡೆದ ದಿಢೀರ್ ಬದಲಾವಣೆಯಲ್ಲಿ ಜೆಡಿಎಸ್ ಮುಖಂಡ ಎಂ ಆರ್ ಮಂಜುನಾಥ್ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಕಣ್ಣೂರು ಬುಲೆಟ್ ಬಸವರಾಜು , ಅಮೀನ್, ಕಿರಣ್ ಹಾಗೂ ಪಟ್ಟಣ ಪಂಚಾಯಿತಿ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸ್ವಾಮಿ,ಕಾರ್ಯಕರ್ತರುಗಳಾದ ಬಾಬು, ವೆಂಕಟೇಶ್, ರಾಚಪ್ಪ , ಸೇರಿದಂತೆ ಇನ್ನಿತರ ಮುಖಂಡರುಗಳು ಸತ್ತೇಗಾಲ ಹ್ಯಾಂಡ್ ಪೋಸ್ಟ್ ಸಮೀಪ ನಿಶಾಂತ್ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಒಂದೆಡೆ ಜೆಡಿಎಸ್ ಪಕ್ಷಕ್ಕೆ ಪಕ್ಷಾಂತರ ಪರ್ವ ನಡೆಯುತ್ತಿದ್ದರೆ,ಇನ್ನೊಂದೆಡೆ ಜೆಡಿಎಸ್ ನಿಂದ ಸಮಾಜಸೇವಕ ನಿಶಾಂತ್ ರವರ ಬಣದಲ್ಲಿ ಹತ್ತಾರು ಜೆಡಿಎಸ್ ಕಾರ್ಯಕರ್ತರು ಗುರುತಿಸಿಕೊಂಡಿರುವುದು ಜೆಡಿಎಸ್ ಮುಖಂಡ ಎಂ ಆರ್ ಮಂಜುನಾಥ್ ರವರಿಗೆ ಹಿನ್ನಡೆಯಾದಂತಾಗಿದೆ.

ಸಂಘಟನೆಯತ್ತ ನಿಶಾಂತ್ : ಹನೂರು ಅಭಿವೃದ್ಧಿಯ ಸಂಕಲ್ಪ ಎಂಬ ಘೋಷಣೆಯೊಂದಿಗೆ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಮಾಜ ಸೇವೆ ಮಾಡುತ್ತಿರುವ ಸಮಾಜ ಸೇವಕ ನಿಶಾಂತ್ ರವರು ಸದ್ದಿಲ್ಲದೆ ಸಂಘಟನೆ ಮಾಡುತ್ತಾ ಮುಂದಿನ ಚುನಾವಣೆಗೆ ತಯಾರಾಗುತ್ತಿದ್ದಾರೆ. ಇವರು ಎಲ್ಲಿಯೂ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿಕೆ ನೀಡಿಲ್ಲ, ಆದರೆ ಇವರ ಸಂಘಟನೆ ಹಾಗೂ ಕಾರ್ಯವೈಖರಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಖಚಿತ ಎಂಬ ಮಾಹಿತಿ ಪತ್ರಿಕೆಗೆ ಬಲ್ಲ ಮೂಲಗಳಿಂದ ಖಚಿತವಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು .ಆದರೆ ಈ ಬಾರಿ ಟಿಕೆಟ್ ವಂಚಿತರು ಪಕ್ಷೇತರರಾಗಿ ಸ್ಪರ್ಧಿಸುವುದು ಖಚಿತವಾಗಿದ್ದು. ಈ ಬಾರಿ ಹನೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!