Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಹಾವು ಮೊಟ್ಟೆಯಿಡುವ ಅಪರೂಪದ ದೃಶ್ಯ ಸೆರೆ ಹಿಡಿದ ಸ್ನೇಕ್ ಸುರೇಶ್

ಸಿದ್ದಾಪುರ :- ಬಹುತೇಕ ಹಾವುಗಳು ಮೊಟ್ಟೆ ಹಾಗೂ ಮರಿ ಹಾಕುವ ಸಂದರ್ಭ ಯಾರಿಗೂ ಕಾಣಿಸದಂತೆ ಕಲ್ಲುಬಂಡೆ ಪೊದೆಗಳಲ್ಲಿ ಅಡಗಿ ಸಂತಾನೋತ್ಪತ್ತಿ ಮಾಡುತ್ತವೆ.
ಅಪರೂಪದ ಹೊಟ್ಟೆ ನೀರೊಳ್ಳೆ ಎಂಬ ಆ 19ಮೊಟ್ಟೆಗಳನ್ನಿಡುವ ದೃಶ್ಯವನ್ನ ಸಿದ್ದಾಪುರ ಗುಹ್ಯ ಗ್ರಾಮದ ಉರಗ ರಕ್ಷಕ ಸುರೇಶ್ ತ ಮ್ಮ ಮೊಬೈಲ್ ಮೂಲಕ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ .

ಹೊಸನಗರ ತಾಲ್ಲೂಕಿನ ಗುಡ್ಡೆಹೊಸೂರು ಸಮೀಪದ ಫಿಶ್ ಫಾರ್ಮ್ ಬಳಿ ಹಾವು ಇರೋ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಸಂದರ್ಭ ಕಲ್ಲು ಗುಂಡಿಯೊಳಗೆ ಮೊಟ್ಟೆ ಇಡಲು ಪ್ರಾರಂಭಿಸಿದ ಹಾವನ್ನ ಕಂಡು ಅಚ್ಚರಿಪಟ್ಟಿದ್ದಾರೆ .
ಕೆಲ ಗಂಟೆ ಕಾಲ ಸ್ಥಳದಲ್ಲೇ ಇದ್ದು ಗಮನಿಸಿದ ಸಂದರ್ಭ 9ಮೊಟ್ಟೆಗಳನ್ನ ಹಾಕಿದ ಹಾವು ಹಾಗೂ ಮೊಟ್ಟೆಗಳನ್ನು ಸುರಕ್ಷಿತವಾಗಿ ಸೆರೆಹಿಡಿದು ಮನೆಯಲ್ಲಿ ಕಾವುಗಿಟ್ಟಿದ್ದಾರೆ.
ನಲವತ್ತು ದಿನಗಳ ಒಳಗೆ ಮೊಟ್ಟೆಯಿಂದ ಹಾವು ಮರಿ ಹೊರ ಬರಲಿದ್ದು
ನಂತರ ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಗುವುದು ಎಂದು ಸುರೇಶ್ ತಿಳಿಸಿದ್ದಾರೆ .

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ