ಮೈಸೂರು : ನಗರದ ಮಹದೇವಪುರ ಬಡಾವಣೆಯ ಮನೆಯೊಂದರಲ್ಲಿ ಶೂ ಒಳಗೆ ನಾಗರಹಾವೊಂದು ಅಡಗಿ ಕುಳಿತು ಮನೆಮಂದಿಯನ್ನೆಲ್ಲ ಗಾಬರಿ ಬೀಳಿಸಿತ್ತು.
ಮನೆ ಮುಂಭಾಗ ಇಟ್ಟಿದ್ದ ಚಪ್ಪಲಿ ಸ್ಟ್ಯಾಂಡ್ ನಲ್ಲಿ ಶೂ ಒಳಗೆ ಅಡಗಿ ಕುಳಿತಿದ್ದ ಹಾವನ್ನು ಕಂಡು ಬೆಚ್ಚಿಬಿದ್ದ ಮನೆಯವರು ಬಳಿಕ ಉರಗ ರಕ್ಷಕ ಸ್ನೇಕ್ ಮಂಜು ಅವರಿಗೆ ಕರೆ ಮಾಡಿದ್ದಾರೆ.
ಸೃಳಕ್ಕೆ ಬಂದ ಮಂಜಿ ಅವರು ಶೂ ಒಳಗೆ ಅಡಗಿದ್ದ ಹಾವನ್ನು ಹೊರಕ್ಕೆ ತಂದು ಸಂರಕ್ಷಿಸಿದ್ದಾರೆ.





