ಮೈಸೂರು: ಸೆಕೆಂಡ್ ಹ್ಯಾಂಡ್ ಕಾರು ಕೊಡಿಸುವುದಾಗಿ ನಂಬಿಸಿ, ವ್ಯಕ್ತಿಯೊಬ್ಬರಿಗೆ ೨೮ ಲಕ್ಷ ರೂ. ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಆದಿಲ್ಖಾನ್ ದುರಾನಿ ಎಂಬುವರು ಕಾರು ಕೊಡಿಸುವುದಾಗಿ ನಂಬಿಸಿ, ನನ್ನಿಂದ ಹಣ ಪಡೆದು ವಂಚಿಸಿದ್ದಾರೆ ಎಂದು ಸೈಯದ್ ಕಲೀಂ ಉರ್ ರೆಹಮಾನ್ ಎಂಬುವರು ನರಸಿಂಹರಾಜ ಠಾಣೆಗೆ ದೂರು ದಾಖಲಿಸಿದ್ದಾರೆ.
ಲಷ್ಕರ್ ಮೊಹಲ್ಲಾದ ಅಶೋಕ ರಸ್ತೆಯ ನಿವಾಸಿಯಾಗಿರುವ ಸೈಯದ್ ಕಲೀಂ ಎಂಬುವರು ಸೆಕೆಂಡ್ ಹ್ಯಾಂಡ್ ಆಡಿ-೭7ಕಾರು ಖರೀದಿಸುವ ಸಂಬಂಧ 28 ಲಕ್ಷ ರೂ. ಮಾತುಕತೆಯಾಯಿತು. ಆರಂಭದಲ್ಲಿ 8 ಲಕ್ಷ ರೂ.ನಗದು ರೂಪದಲ್ಲಿ ಉಳಿಕೆ ಮೊತ್ತವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿದೆನು. ಇದಾದ ಬಳಿಕ ಕಾರು ನೀಡಿದ್ದ ಆದಿಲ್, ದಾಖಲಾತಿ ನೀಡಿರಲಿಲ್ಲ.
ಕಾರು ಪಡೆದ ಕೆಲವೇ ದಿನಗಳಲ್ಲಿ ಎಂಜಿನ್ ಸಮಸ್ಯೆ ಕಾಣಿಸಿಕೊಂಡಿತು. ಈ ಬಗ್ಗೆ ಆದಿಲ್ಗೆ ತಿಳಿಸಿದ ವೇಳೆ ಸರಿ ಮಾಡಿಕೊಡುವುದಾಗಿ ನಂಬಿಸಿ, ಕಾರು ಕೊಂಡೊಯ್ದು ಇದುವರೆಗೂ ಹಿಂತಿರುಗಿಸಿಲ್ಲ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.