ಸತ್ಯದ ಶೋಧಕನಾದ ಸಾಧಕನು
ಮೊಟ್ಟಮೊದಲು ಮಾಡಬೇಕಾದ ಮಹತ್ತರ
ಕಾರ್ಯವೆಂದರೆ ತನ್ನ ಹೃದಯದಲ್ಲಿ
‘ಪ್ರೇಮದ ಜ್ಯೋತಿ’ಯನ್ನು
ಹೊತ್ತಿಸುವುದು.
ಕುದಿಯುವವರು ಕುದಿಯಲಿ,
ಉರಿಯುವವರು ಉರಿಯಲಿ,
ನಿನ್ನಪಾಡಿಗೆ ನೀನಿರು….!
ಕುದಿಯುವವರು ಆವಿಯಾಗುತ್ತಾರೆ.
ಉರಿಯುವವರು ಬೂದಿಯಾಗುತ್ತಾರೆ.
ಸೂರ್ಯನ ಕಿರಣಗಳು ಕೊಳಕು
ಇರುವ ಜಾಗಕ್ಕೂ ಹೋಗುತ್ತದೆ.
ಆದರೆ ಅದು ಕೊಳಕಾಗುವುದಿಲ್ಲ.
ನಾವು ಬದುಕಿನಲ್ಲಿ ಸೂರ್ಯನ ಕಿರಣದಂತೆ
ಆಗಬೇಕು,ಯಾವ ಜಾಗಕ್ಕೆ ಹೋದರೂ,
ಯಾರ ಜೊತೆ ಇದ್ದರೂ ನಾವು
ನಾವಾಗಿರಬೇಕು,ಕೊಳಕಾಗಬಾರದು.
ಮನಸ್ಸು ಮಲಿನವಾದರೆ
ಮಾತು ಕಲ್ಮಶವಾಗಿ ಹೊರಡುತ್ತದೆ.
ಹೃದಯ ಪರಿಮಳ, ಮಾತು ಮಕರಂದ
ಲಾಯರ್ ಇಲ್ಲದಿದ್ದರೆ ನ್ಯಾಯವಿಲ್ಲ.
ಡಾಕ್ಟರ್ ಇಲ್ಲದಿದ್ದರೆ ಆರೋಗ್ಯವಿಲ್ಲ.
ಪೊಲೀಸ್ ಇಲ್ಲದಿದ್ದರೆ ಭದ್ರತೆ ಇಲ್ಲ.
ಇಂಜಿನಿಯರ್ ಇಲ್ಲದಿದ್ದರೆ ಟೆಕ್ನಾಲಜಿ ಇಲ್ಲ.
ಆದರೆ ಶಿಕ್ಷಕರು ಇಲ್ಲದಿದ್ದರೆ, ಮೇಲಿನ ಯಾರೂ ಇಲ್ಲ.
ಆದುದರಿಂದ ಶಿಕ್ಷಕರನ್ನು ಗೌರವಿಸೋಣ.
ಗೆದ್ದವರಷ್ಟೇ
ಬದುಕಿನ ಪಾಠ ಹೇಳಬೇಕಂತಿಲ್ಲ.
ಸೋತವರು ಅದಕ್ಕಿಂತಲೂ ಚಂದದ
ಪಾಠವನ್ನು ಕಲಿತಿರುತ್ತಾರೆ.
ನೆರೆ ಹೊರೆಯವರನ್ನು
ಕಂಡು ನಾನು ಉರಿದೇಳುತ್ತಿದ್ದರೆ
ನನ್ನ ಪೂಜೆ,ಪುನಸ್ಕಾರಗಳಿಗೇನು ಬೆಲೆ?
ಈ ಪ್ರಪಂಚದಲ್ಲಿ
ಒಳ್ಳೆಯದನ್ನೆಲ್ಲಾ ಹೇಳಿ ಆಗಿದೆ
ಉಳಿದಿರುವುದು
ಆಚರಣೆ ಮಾತ್ರ.





