ಮೈಸೂರು : ಆರ್‌ಎಸ್‌ಎಸ್‌ನ ಸಾವರ್ಕರ್ ಜೀವನ ಚರಿತ್ರೆ ಮತ್ತು ಹೋರಾಟವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಇಂದಿನಿಂದ ಆ. 30ರ ವರೆಗೆ ಮೈಸೂರು-ಮಂಡ್ಯ-ಚಾಮರಾಜನಗರ ಜಿಲ್ಲೆಗಳ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಹಮ್ಮಿಕೊಂಡಿರುವ ‘ಸಾವರ್ಕರ್ ರಥಯಾತ್ರೆ’ಯನ್ನು ಇಂದು ಮೈಸೂರಿನಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಹೈವೇ ವೃತ್ತದಿಂದ ಯಾದಗಿರಿ, ಮಾತೃಮಂಡಳಿ, ಕೆ.ಡಿ.ರಸ್ತೆ, ಜೆ.ಸಿ.ರಸ್ತೆಯಲ್ಲಿ ಸಂಚರಿಸಿತು.
ರಥಯಾತ್ರೆಯೊಂದಿಗೆ ಚಾಮರಾಜ ಕ್ಷೇತ್ರದ ನೂರಾರು ಕಾರ್ಯಕರ್ತರು ಬೈಕ್ ನೊಂದಿಗೆ ಸಂಚರಿಸಿದರು.
ರಥಯಾತ್ರೆಯು ಚಾಮರಾಜ ಕ್ಷೇತ್ರದಲ್ಲಿ ಸಂಚಾರ ಪೂರ್ಣಗೊಳಿಸಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತನ್ನ ಸಂಚಾರವನ್ನು ಆರಂಭಿಸಿದೆ. ಇಂದಿನ ಯಾತ್ರೆಯಲ್ಲಿ ಶಾಸಕ ಎಲ್. ನಾಗೇಂದ್ರ ಸೇರಿದಂತೆ ಹಲವಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.
ಆ.23 ರಂದು ಮಾಜಿ ಮುಖ್ಯಮಂತ್ರಿ ಬಿ.ಎಎಸ್.ಯಡಿಯೂರಪ್ಪ ಅವರು ಯಾತ್ರೆಗೆ ಚಾಲನೆ ನೀಡಿದ್ದರು. ಈ ಯಾತ್ರೆಯು ನಾಳೆಯು ತಿ.ನರಸೀಪುರ, ಬನ್ನೂರು, ಕಿರುಗಾವಲು, ಮಳವಳ್ಳಿ, ಹಲಗೂರು, ಕೆ.ಎಂ.ದೊಡ್ಡಿ, ಮದ್ದೂರು, ಬೇಸಗರಹಳ್ಳಿ. ಆ.೨೮ರಂದು ಕೊಪ್ಪ, ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ. ಆ.೨೯ರಂದು ಕಿಕ್ಕೇರಿ, ಕೆ.ಆರ್.ಪೇಟೆ, ಸಾಲಿಗ್ರಾಮ, ಪಿರಿಯಾಪಟ್ಟಣದಲ್ಲಿ ರಥಯಾತ್ರೆ ನಡೆಯಲಿದ್ದು, ಆ.೩೦ರಂದು ಹುಣಸೂರು ಮಾರ್ಗವಾಗಿ ಮೈಸೂರಿಗೆ ಹಿಂದಿರುಗಲಿದೆ. ಬಳಿಕ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸಮಾರೋಪ ಸಮಾರಂಭ ಜರುಗಲಿದೆ.