Mysore
16
clear sky

Social Media

ಗುರುವಾರ, 25 ಡಿಸೆಂಬರ್ 2025
Light
Dark

ಸುತ್ತೂರು ಜಾತ್ರೆ : ದಾಂಪತ್ಯಜೀವನಕ್ಕೆ ಕಾಲಿಟ್ಟ 100ಕ್ಕೂ ಅಧಿಕ ಜೋಡಿ

ಮೈಸೂರು: ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ಕಪಿಲಾ ನದಿತೀರದ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಗುರುವಾರ ಜರುಗಿದ ಸಾಮೂಹಿಕ ವಿವಾಹದಲ್ಲಿ ಸುಮಾರು 114 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಾಡಿನ ಮಠಾಧೀಶರು,ಗಣ್ಯರ ಸಮ್ಮುಖದಲ್ಲಿ ದಾಂಪತ್ಯಜೀವನಕ್ಕೆ ಕಾಲಿರಿಸುವ ಮೂಲಕ ಸತಿ-ಪತಿಗಳಾದರು.
ಸುತ್ತೂರು ಮಠದ ಶ್ರೀಶಿವರಾತ್ರಿದೇಶಿಕೇಂದ್ರಸ್ವಾಮೀಜಿ, ಹುಕ್ಕೇರಿ ಶ್ರೀಗುರುಕಾಂತೇಶ್ವರ ಸಂಸ್ಥಾನ ಹಿರೇಮಠ ಡಾ.ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬೆಂಗಳೂರು ವಾಸವಿ ಮಠದ ಶ್ರೀಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಸಚಿವರಾದ ಎಸ್.ಟಿ.ಸೋಮಶೇಖರ್, ಸಿ.ಸಿ.ಪಾಟೀಲ್, ಉದ್ಯಮಿ ಎಸ್.ಎಸ್.ಗಣೇಶ್ ಮೊದಲಾದ ಹರಗುರುಗಳು, ಗಣ್ಯರ ಸಮ್ಮುಖದಲ್ಲಿ 114 ಜೋಡಿಗಳು ಮಾಂಗಲ್ಯಧಾರಣೆ ಬಳಿಕ ಪ್ರತಿಜ್ಞಾ ವಿಧಿಬೋಧಿಸಿದರು.


ಈ ಸಾಮೂಹಿಕ ವಿವಾಹದಲ್ಲಿ ಮಠದಿಂದ ನೂತನ ವಧು- ವರರಿಗೆ ಮಾಂಗಲ್ಯದೊಂದಿಗೆ ವಸ್ತ್ರವನ್ನು ನೀಡುವುದರೊಂದಿಗೆ ಬಾಗಿನ ನೀಡಲಾಯಿತು. ಸ್ವಾಮೀಜಿಗಳು, ಗಣ್ಯರು ತಾಳಿ ಇದ್ದ ತಟ್ಟೆಯನ್ನು ಸ್ಪರ್ಶಿಸಿ ಸ್ವಯಂ ಸೇವಕರಿಗೆ ನೀಡಿದರು. ನಂತರ ನಿಗದಿತ ಸ್ಥಳದಲ್ಲಿ ಕೂತಿದ್ದ ವಧುವರರಿಗೆ ಕೊಟ್ಟರು. ಅಮೇಲೆ ಗಣ್ಯರು ಅರಿಶಿನ ದಾರವಿದ್ದ ಮಾಂಗಲ್ಯವನ್ನುನೀಡಿ, ನೂತನ ವಧು- ವರರರಿಗೆ ಶುಭ ಹಾರೈಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪ್ರತಿಜ್ಞಾವಿಧಿ ಬೋಧಿಸಿದರೆ, ಸಾಮೂಹಿಕ ವಿವಾಹವಾದ ಎಲ್ಲರಿಗೂ ಉಪ ನೊಂದಣಾಧಿಕಾರಿಗಳ ಕಚೇರಿಯಿಂದ ಆಗಮಿಸಿದ್ದ ಅಧಿಕಾರಿಗಳು ಸಾಂಕೇತಿಕವಾಗಿ ಐದು ನೂತನ ವಧು-ವರರಿಗೆ ನೋಂದಣಿ ಪ್ರಮಾಣ ಪತ್ರ ವಿತರಿಸಿದರು.

ಎಲ್ಲರಿಗೂ ಬಾಗಿನ: ನೂತನ ವಧುವರರಿಗೆ ಬಸವೇಶ್ವರ ವಿದ್ಯಾರ್ಥಿ ನಿಲಯದಲ್ಲಿ ವಿಶೇಷ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು. ಎಲ್ಲಾ ಜೋಡಿಗಳಿಗೂ ಮಠದ ಪರವಾಗಿ ಬಾಗಿನ ನೀಡಿ ಸತ್ಕರಿಸಲಾಯಿತು. ಮಠದಿಂದಲೇ ಮೊರಕ್ಕೆ ಹಾಕಿದ್ದ ಬಾಗಿನದಲ್ಲಿ ವಸ್ತ್ರ,ಬಳೆ,ಅಕ್ಕಿ,ಅರಿಶಿಣಿ-ಕುಂಕುಮ,ಬಟ್ಟಲು ಇನ್ನಿತರ ವಸ್ತುಗಳು ಇದ್ದವು. ಬಾಗಿನ ಸ್ವೀಕಾರ ಮಾಡಿ ಹೊರ ಬಂದ ದಂಪತಿಗಳಿಗೆ ಕುಟುಂಬದವರು,ಸಂಬಂಧಿಕರು ಉಡುಗೊರೆಯನ್ನು ಕೊಟ್ಟು ಹಾರೈಸುತ್ತಿದ್ದು ಕಾಣಿಸಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!