ಹುಣಸೂರು: ೨೦ ವರ್ಷಗಳಿಂದ ಕುಡಿಯಲು ನೀರಿನ ವ್ವವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದ ಸರ್ಕಾರಿ ಶಾಲೆಗೆ ಸ್ಥಳಿಯ ಸತ್ಯ ಎಂ.ಎ.ಎಸ್ .ಫೌಂಡೇಷನ್ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದೆ.
ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ೪೫೪ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು, ಕಳೆದ ಇಪ್ಪತ್ತು ವರ್ಷಗಳಿಂದಲೂ ಈ ಶಾಲೆಗೆ ಪ್ರತ್ಯೇಕ ನೀರಿನ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿನಿಯರು ಹಾಗೂ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂಧಿಗಳು ಪರದಾಡುತ್ತಿದ್ದರು.
ಈ ಶಾಲೆಗೆ, ಪಕ್ಕದ ಕಾಲೇಜಿನಿಂದ ನೀರು ಸರಬರಾಜಾಗುತ್ತಿದ್ದು, ಕಾಲೇಜಿಗೆ ರಜೆ ಇದ್ದರೆ ಪ್ರೌಢಶಾಲೆಯಲ್ಲಿ ನೀರೂ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಈ ಬಗ್ಗೆ ಮಕ್ಕಳ ಪೋಷಕರು ಸತ್ಯ ಎಂ. ಎ ಎಸ್ ಫೌಂಡೇಷನ್ ಗಮನಕ್ಕೆ ತಂದಿದ್ದರು.
ಸ್ಥಳಕ್ಕೆ ಹೋಗಿ ಅವ್ಯವಸ್ಥೆ ಯನ್ನು ಪರಿಶೀಲಿಸಿದ ಸತ್ಯಪ್ಪ ಅವರು ತಕ್ಷಣವೇ ಈ ಬಗ್ಗೆ ಪತ್ರಿಕೆಯ ಮುಖಾಂತರ ಸರ್ಕಾರ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದಲ್ಲದೆ, ಮಾನ್ಯ
ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು, ಶಿಕ್ಷಣ ಅಧಿಕಾರಿಗಳಿಗೆ ನಿರಂತರವಾಗಿ ಮನವಿ ಸಲ್ಲಿಸುತ್ತಾ ಬಂದರು. ನಿರಂತರ ಹೋರಾಟ ಬಳಿಕ ಸ್ಥಳಿಯ ಶಾಸಕರು ತಕ್ಷಣವೇ ಸ್ಪಂದಿಸಿ ಶಾಲೆಗೆ ಪ್ರತ್ಯೇಕವಾಗಿ ಕೊಳವೆ ಬಾವಿ ಕೊರೆಸಿದ್ದಾರೆ.