Mysore
15
clear sky

Social Media

ಗುರುವಾರ, 25 ಡಿಸೆಂಬರ್ 2025
Light
Dark

ಇಂದಿನಿಂದ ಸರಗೂರಿನಲ್ಲಿ ಗ್ರಾಮೀಣ ದಸರಾ

ಸರಗೂರು: ಗ್ರಾಮೀಣ ದಸರಾ ಆಚರಣೆಯ ಹಿನ್ನೆಲೆಯಲ್ಲಿ ಸೆ.೨೬ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾಕೂಟ,ರಂಗೋಲಿ ಸ್ಪರ್ಧೆ ಮುಂತಾದವುಗಳು ೩ ದಿನಗಳ ಕಾಲ ಜರುಗಲಿವೆ ಎಂದು ತಾಪಂ ಸಾರ್ವಜನಿಕ ಅಧಿಕಾರಿ ಹಾಗೂ ಗ್ರಾಮೀಣ ದಸರಾ ಸಮಿತಿಯ ಕಾರ್ಯದರ್ಶಿ ಕೆ.ಸುಷ್ಮ ತಿಳಿಸಿದರು.

ಪಟ್ಟಣದ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆದ ಗ್ರಾಮೀಣ ದಸರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸೆ.೨೬ ರಂದು ಪಟ್ಟಣದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬೆಳಿಗ್ಗೆ ೯.೩೦ ಕ್ಕೆ ಗ್ರಾಮೀಣ ದಸರಾ ಕ್ರೀಡಾಕೂಟ ನಡೆಯಲಿದ್ದು, ಶಾಸಕರಾದ ಅನಿಲ್ ಚಿಕ್ಕಮಾದು ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ರೀತಿಯ ಆಟೋಟಗಳು ಇರಲಿವೆ ಎಂದರು.

ಸೆ.೨೭ರಂದು ಪಟ್ಟಣದ ಶಂಕರ್ ಚಿತ್ರಮಂದಿರಲ್ಲಿ ಐತಿಹಾಸಿಕ ಚಿತ್ರಗಳ ಪ್ರದರ್ಶನ ನಡೆಯಲಿದೆ. ಸೆ.೨೮ ರಂದು ಶಾಸಕರಾದ ಅನಿಲ್ ಚಿಕ್ಕಮಾದು ದಸರಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ ೯ ಗಂಟೆಗೆ ಏಳನೇ ವಾರ್ಡಿನಲ್ಲಿ ಇರುವ ಲಕ್ಷ್ತ್ರ್ಮಿ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ದಸರಾ ಮೆರವಣಿಗೆಯು ಶ್ರೀ ಜಯಚಾಮ ರಾಜೇಂದ್ರ ಕ್ರೀಡಾಂಗಣದಲ್ಲಿ ಮುಕ್ತಾಯವಾಗಲಿದೆ. ಶಾಲಾ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ವಿವಿಧ ಇಲಾಖೆಗಳ ವತಿಯಿಂದ, ವಸ್ತುಪ್ರದರ್ಶನ, ಹಾಗೂ ಸ್ತಬ್ಧಚಿತ್ರಗಳ ಮೆರವಣಿಗೆ ಇರಲಿದೆ ಎಂದರು.
ಗ್ರಾಮೀಣ ದಸರಾ ಸಮಿತಿ ಸದಸ್ಯರಾದ ಗ್ರೇಡ್ ೨ ತಹಸಿಲ್ದಾರ್ ಪರಶಿವಮೂರ್ತಿ, ಸರಗೂರಿನ ಆರಕ್ಷಕ ವೃತ್ತ ನಿರೀಕ್ಷಕರಾದ ಎನ್.ಆನಂದ್, ಉಪ ನಿರೀಕ್ಷಕರಾದ ಶ್ರವಣದಾಸರೆಡ್ಡಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸತೀಶ್, ತಾಪಂ ಯೋಜನಾಧಿಕಾರಿ ದೇವಸ್ವಾಮಿ, ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಉಪಾಧ್ಯಕ್ಷ ವಿನಾಯಕ ಪ್ರಸಾದ್, ಸದಸ್ಯರುಗಳಾದ ಶಿವಕುಮಾರ್(ವೀರೇಶ್), ಚೆಲುವ ಕೃಷ್ಣ, ಸಣ್ಣತಾಯಮ್ಮ, ಅಭಿಮಾನಿ ಬೇಕರಿ ಸ್ವಾಮಿ, ಶ್ರೀನಾಥ್, ನವೀನ್ ಕುಮಾರ್, ಎನ್‌ಎಸ್ ಪ್ರತಾಪ್, ಅಧಿಕಾರಿಗಳು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!