Mysore
29
few clouds

Social Media

ಮಂಗಳವಾರ, 27 ಜನವರಿ 2026
Light
Dark

ಸಂಸ್ಕೃತ ಶಿಕ್ಷಕ ಮಲ್ಲಣ್ಣ ಅವರಿಗೆ ಕಾಯಕ ವಿಭೂಷಣ ಮೇರುಗಿರಿ ಪ್ರಶಸ್ತಿ

ಹನೂರು :  ಮೈಸೂರು ನಟರಾಜ ಪ್ರತಿಷ್ಠಾನ ವತಿಯಿಂದ ನೀಡಲಾಗುವ ವಿಭೂಷಣ ಮೇರುಗಿರಿ ಪ್ರಶಸ್ತಿಯನ್ನು ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಂಸ್ಕೃತ ಶಿಕ್ಷಕ ಮಲ್ಲಣ್ಣ ಅವರು ಪಡೆದುಕೊಂಡಿದ್ದಾರೆ.

ತಾಲೂಕಿನ ಉದ್ದನೂರು ಗ್ರಾಮದ ಸಂಸ್ಕೃತ ಶಿಕ್ಷಕ ಮಲ್ಲಣ್ಣ ಅವರು 32 ವರ್ಷಗಳ ಕಾಲ ನಿರಂತರ ಸೇವೆಯನ್ನು ಸಲ್ಲಿಸಿದ್ದಾರಲ್ಲದೆ ನಾಲ್ಕು ವರ್ಷದಿಂದ ಮೈಸೂರು ವಲಯದ ಸಂಸ್ಕೃತ ಪಾಠ ಶಾಲೆಗಳ ವಿಷಯ ಪರೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ವಿಭ ಸಂಸ್ಕೃತ ಪಠ್ಯಪುಸ್ತಕ ರಚನೆಯಲ್ಲಿ ಮಾರ್ಗದರ್ಶಕರಾಗಿ ಕೆಲಸ ನಿರ್ವಹಿಸಿದ್ದಾರೆ. ಇವರ ಶಿಕ್ಷಣ ಹಾಗೂ ಧಾರ್ಮಿಕ ಕ್ಷೇತ್ರದ ಸೇವೆಯನ್ನು ಮನಗಂಡು ಮೈಸೂರು ನಟರಾಜ ಪ್ರತಿಷ್ಠಾನ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಭಿನಂದನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!