ಸುಂಟಿಕೊಪ್ಪ: ಕಾರಿನಲ್ಲಿ ಅಕ್ರಮವಾಗಿ ಗೋಮಾಂಸವನ್ನು ತಂದು ಪಟ್ಟಣದಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಾಲು ಸಮೇತ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.
ಮಡಿಕೇರಿ ಆಜಾದ್ ನಗರದ ಬಶೀರ್ ಎಂಬವರ ಪುತ್ರ ಜಮೀರ್ ಎಂಬವರು ಕಾರಿನಲ್ಲಿ ತಂದು ವಾರಾಟ ಮಾಡುತ್ತಿದ್ದನ್ನು ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿದ ಸುಂಟಿಕೊಪ್ಪ ಪೊಲೀಸರು, ಕುಶಾಲನಗರ ಡಿವೈಎಸ್ಪಿ ಗಂಗಾಧರಪ್ಪ, ವೃತ್ತ ನಿರೀಕ್ಷಕ ಮಹೇಶ್ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಸುಂಟಿಕೊಪ್ಪ ಠಾಣಾಧಿಕಾರಿ ಸ್ವಾಮಿ, ಎಎಸ್‌ಐ ಶಿವಪ್ಪ, ಮುಖ್ಯಪೇದೆ ಸತೀಶ, ಪೇದೆಗಳಾದ ಜಗದೀಶ್, ಶ್ರೀಕಾಂತ್, ಬಿರದಾರ, ಜೈಶಂಕರ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು