ಶೂ, ಚಪ್ಪಲಿ ಕೈಯಲ್ಲಿ ಹಿಡಿದು ಹಳ್ಳಕೊಳ್ಳ ದಾಟಿ ಶಾಲೆಗೆ ಹೋಗುವ ವಿದ್ಯಾರ್ಥಿಗಳು; ೨೦ ವರ್ಷಗಳಿಂದಲೂ ಇದೇ ಸಮಸ್ಯೆ
ವರದಿ: ಮೋಹನ್ ಕುಮಾರ್ ಬಿ.ಟಿ.
ಮಂಡ್ಯ: ಪ್ರಭಾವಿಯೊಬ್ಬರು ರಸ್ತೆಯನ್ನು ಅತಿಕ್ರಮಿಸಿಕೊಂಡು ಜಮೀನು ಮಾಡುತ್ತಿರುವುದರಿಂದ ವಿದ್ಯಾರ್ಥಿಗಳು ಹಳ್ಳ-ಕೊಳ್ಳಗಳನ್ನು ದಾಟಿ ಶಾಲೆಗೆ ಹೋಗುವ ಪರಿಸ್ಥಿತಿ ತಾಲ್ಲೂಕಿನ ನೊದೆಕೊಪ್ಪಲು ಗ್ರಾಮದಲ್ಲಿ ನಿರ್ಮಾಣವಾಗಿದೆ.
ನೊದೆಕೊಪ್ಪಲು ಗ್ರಾಮದ ಸರ್ಕಾರಿ ಶಾಲೆಗೆ ಹೋಗಲು ವಿದ್ಯಾರ್ಥಿಗಳಿಗೆ ಗದ್ದೆ ಬಯಲು, ಹಳ್ಳಕೊಳ್ಳಗಳೇ ದಾರಿಯಾಗಿವೆ. ವಿದ್ಯಾರ್ಥಿಗಳು ಶೂ ಮತ್ತು ಚಪ್ಪಲಿಗಳನ್ನು ಬರಿಗೈಯಲ್ಲಿಯೇ ಹಿಡಿದುಕೊಂಡು ಹೋಗುತ್ತಿದ್ದು, ಒತ್ತುವರಿ ಮಾಕೊಂಡಿರುವ ರಸ್ತೆಯನ್ನು ತೆರವು ಮಾಡಲು ಒತ್ತುವರಿದಾರರು ಒಪ್ಪುತ್ತಿಲ್ಲ.
ಗ್ರಾಮದ ಸ.ನಂ.೬ ಮತ್ತು ೭ರ ನಡುವೆ ಇರುವ ಸುಮಾರು ೧೧೦ ಮೀಟರ್ ಉದ್ದ ಹಾಗೂ ೮೨ ಅಡಿ ಅಗಲದ ರಸ್ತೆಯನ್ನು ಶಿವಶಂಕರ್ ಎಂಬವರು ತಮ್ಮ ಜಮೀನಿನ ನಡುವೆ ಸಂಪೂರ್ಣವಾಗಿ ಸೇರಿಸಿಕೊಂಡು ವಿನಾಕಾರಣ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳಿಗೆ ಅನಾನುಕೂಲ ಉಂಟು ಮಾಡುತ್ತಿದ್ದಾರೆ. ಒತ್ತುವರಿ ರಸ್ತೆಯನ್ನು ಸಂಪೂರ್ಣವಾಗಿ ಬಿಡಿಸಿಕೊಟ್ಟು ಶಾಲೆಗೆ ಅನುಕೂಲ ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ರಸ್ತೆ ಇಲ್ಲದೇ ಅಂಗನವಾಡಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುಮಾರು ೬೦ಕ್ಕೂ ಹೆಚ್ಚು ಮಕ್ಕಳಿಗೆ ಅನಾನುಕೂಲವಾಗಿದೆ. ಕಳೆದ ೨೦ ವರ್ಷಗಳಿಂದಲೂ ಇದೇ ಸಮಸ್ಯೆಗಳಿದ್ದು, ಗ್ರಾಮದ ಮುಖಂಡರು ಒತ್ತುವರಿಯಾಗಿರುವ ರಸ್ತೆ ಕೇಳುವುದಕ್ಕೂ ಭುಂಪಡುವ ಸ್ಥಿತಿ ಉಂಟಾಗಿದೆ. ಈಗಾಗಲೇ ತಹಸಿಲ್ದಾರ್ ಅವರ ಗಮನಕ್ಕೆ ತರಲಾಗಿದೆ. ಅವರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒತ್ತುವರಿ ತೆರವು ಮಾಡಿಕೊಡುವ ಭರವಸೆ ನೀಡಿದ್ದಾರೆ ಅಷ್ಟೇ, ಅದು ಇನ್ನೂ ಕಾರ್ಯಗತವಾಗಿಲ್ಲ.
‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಎಂಬ ಕಾರ್ಯಕ್ರಮದಲ್ಲಿಯೂ ಗ್ರಾಮಸ್ಥರು ಈ ಸಮಸ್ಯೆ ಪರಿಹರಿಸಿಕೊಡಲು ಅರ್ಜಿ ಸಲ್ಲಿಸಿದ್ದಾರೆ. ತಾಲ್ಲೂಕು ಸರ್ವೇಯರ್ ಕೂಡ ಅಳತೆ ಮಾಡಲು ಬಂದಾಗ ಶಿವಶಂಕರ್ ಅವರು ಜಗಳ ವಾಡಿ ಕಳುಹಿಸಿದ ಘಟನೆಯೂ ನಡೆದಿದೆ. ಹಲವು ರಾಜಿ ಸಂಧಾನಗಳನ್ನು ಮಾಡಿದರೂ ಯಾವುದೇ ದಾಖಲೆುಂನ್ನು ಇಟ್ಟುಕೊಳ್ಳದೇ ಪ್ರಭಾವಿಗಳ ಬೆಂಬಲದಿಂದ ಗ್ರಾಮದ ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆ ಕೊಡುತ್ತಿದ್ದಾರೆ.
ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಜಮೀನುಗಳನ್ನು ಮಾಡುತ್ತಿರುವುದು ಒಂದೆಡೆಯಾದರೆ, ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ಓಡಾಡಲೆಂದು ರಸ್ತೆ ಬಿಟ್ಟಿದ್ದರೆ ಆ ರಸ್ತೆುಂನ್ನೇ ನುಂಗುವ ಕಳ್ಳರಿದ್ದಾರೆ ಎನ್ನುವುದು ಇಂದು ಜಗಜ್ಜಾಹಿರವಾಗಿದೆ. ಸಂಬಂಧಿಸಿದ ತಹಸಿಲ್ದಾರ್ ಹಾಗೂ ಜಿಲ್ಲಾಧಿಕಾರಿಗಳು ಒತ್ತುವರಿಯಾಗಿರುವ ಕೆರೆಗಳು ಹಾಗೂ ರಸ್ತೆಗಳನ್ನು ವಶಕ್ಕೆ ಪಡೆದು ಗ್ರಾಮಸ್ಥರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಪತ್ರಿಕೆಯ ಆಶಯವಾಗಿದೆ.
ಸುವಾರು ೨೦ ವರ್ಷಗಳಿಂದಲೂ ರಸ್ತೆಯನ್ನು ಅತಿಕ್ರಮಿಸಿಕೊಂಡು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳಿಗೆ ಅನಾನುಕೂಲ ವಾಡಿದ್ದು, ತಕ್ಷಣವೇ ರಸ್ತೆಯ ಒತ್ತುವರಿ ತೆರವು ಮಾಡದಿದ್ದರೆ ಗ್ರಾಮಸ್ಥರು ಒಟ್ಟುಗೂಡಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗುವುದು. -ಎಂ.ಎನ್.ಬಲರಾಮು, ಗ್ರಾಪಂ ಸದಸ್ಯ.
ನೊದೆಕೊಪ್ಪಲು ಗ್ರಾಮದ ಅಂಗನವಾಡಿ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಒತ್ತುವರಿ ರಸ್ತೆ ಬಿಡಿಸಿಕೊಡುವ ಉದ್ದೇಶದಿಂದ ಗ್ರಾಮಸ್ಥರು ಮನವಿ ಮಾಡಿದ್ದಾರೆ. ರೈತರು ಹಿಡುವಳಿ ಮಾಡುತ್ತಿರುವ ಜಮೀನಿನಲ್ಲಿ ಏಕಾಏಕಿ ಹೋಗಿ ತೆರವು ಕಾರ್ಯಾಚರಣೆ ಮಾಡಿಸಲು ದಾಖಲಾತಿಗಳು ಬೇಕಿದೆ. ಅದರಂತೆ ಸರ್ವೇಯರ್ ಗಳಿಗೂ ತಿಳಿಸಿದ್ದೇನೆ, ದಾಖಲಾತಿ ಸಮೇತ ರಸ್ತೆ ನಕ್ಷೆ ತೆಗೆದುಕೊಂಡು ಹೋಗಿ ತೆರವು ಮಾಡಿಸುತ್ತೇನೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಮಸ್ಯೆ ಬಗೆಹರಿಸಿಕೊಡುತ್ತೇನೆ. -ಕುಂ.ಞ.ಅಹಮದ್, ತಹಸಿಲ್ದಾರ್.