ಮಂಡ್ಯ: ಕುಡಿದ ನಶೆಯಲ್ಲಿ ಇಬ್ಬರು ಯುವಕರ ನಡುವೆ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬುಯ್ಯನದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಹಾಡುಹಗಲೇ ಈ ಭೀಕರ ಹತ್ಯೆ ನಡೆದಿದ್ದು, ಚಂದನ್ (23) ಮೃತ ದುರ್ದೈವಿಯಾಗಿದ್ದು ನಾಗರಾಜ್ (26) ಕೊಲೆ ಆರೋಪಿಯಾಗಿದ್ದಾನೆ. ನಗರದ ರೇಣುಕಾ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಇಬ್ಬರು ಕುಡಿಯುವ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಮಾತು ಹೆಚ್ಚಾದಂತೆ ಇಬ್ಬರ ಮಧ್ಯೆ ಮಾರಾ ಮಾರಿ ನಡೆದಿದೆ. ಬಳಿಕ ಹೊರ ಬಂದ ಚಂದನ್ ಮೇಲೆ ನಾಗರಾಜ್ ದೊಣ್ಣೆಯಿಂದ ಹೊಡೆದು ಆತನ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ.
ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಲಗೂರು ಪೊಲೀಸರು ಆರೋಪಿ ನಾಗರಜ್‌ನನ್ನು ಬಂಧಿಸಿದ್ದಾರೆ.