Mysore
19
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ಮತಾಂತರಕ್ಕೆ ಯತ್ನ ಆರೋಪ; ಐವರು ವಶ

ಭಾರತೀನಗರ: ಕರಪತ್ರ ಹಂಚಿಕೆ ಮಾಡುವ ಮೂಲಕ ಕ್ರೈಸ್ತ ಧರ್ಮಕ್ಕೆ ಮತಾಂತರಕ್ಕೆ ಪ್ರಯತ್ನಿಸುತ್ತಿದ್ದ ಐದು ಮಂದಿಯನ್ನು ಸಾರ್ವಜನಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಅಣ್ಣೂರು ಚರ್ಚ್ ಬಳಿ ನಡೆದಿದೆ.

ಗ್ರಾಮದ ಚರ್ಚ್ ಬಳಿ ಟಿ.ಎಸ್. ಕುಮಾರ್‌ ನಾಯಕ, ಎಸ್.ಸುಮಂತ್, ಈ.ಎನ್.

ವಿನಯ್‌ ಗೌಡ, ಎಸ್.ಸಂದೀಪ್, ಹೇಮಂತ್ ಕುಮಾರ್ ಎಂಬುವರು ಕ್ರೈಸ್ತರ ಪರವಾಗಿರುವ ಕರಪತ್ರಗಳನ್ನು ಸಾರ್ವಜನಿಕರಿಗೆ ನೀಡಿ ಮತಾಂತರ ಆಗುವಂತೆ ಒತ್ತಾಯಿಸುತ್ತಿದ್ದರು ಎಂದು ಸಾರ್ವಜನಿಕರು ದೂರಿದರು.

ಅಣ್ಣೂರು ರಸ್ತೆಯ ಚರ್ಚ್ ಮುಂಭಾಗದಲ್ಲಿ ಹೋಗುತ್ತಿದ್ದಾಗ ವಾಯ್ಸ್‌ ಆಫ್ ಜೀಸಸ್ ಪಬ್ಲಿಕೇಷನ್ ಹಾಗೂ ವಾಯ್ಸ್‌ ಆಫ್ ಜೀಸಸ್ ಮೀಡಿಯಾ ಹೆಸರಿನ ಕರಪತ್ರ ನೀಡಿದ್ದಾರೆ ಎಂದು ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ದೇವೇಗೌಡನದೊಡ್ಡಿ ಅಭಿ ತಿಳಿಸಿದ್ದಾರೆ.

ಕರಪತ್ರ ಹಂಚಿ ಮತಾಂತರಕ್ಕೆ ಯತ್ನಿಸುತ್ತಿದ್ದವರನ್ನು ಶಿವರಾಮ್, ರಂಜಿತ್, ನಂದೀಶ್, ಸತೋಷ್ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಕೆ.ಎಂ.ದೊಡ್ಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!