ಮಂಡ್ಯ : ಅತ್ಯಾಚಾರಕ್ಕೆ ತುತ್ತಾಗಿ ಬರ್ಬರವಾಗಿ ಕೊಲೆಯಾದ ಮಳವಳ್ಳಿಯ ಬಾಲಕಿ ನಿವಾಸಕ್ಕೆ ಇಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಈ ಘಟನೆ ನನ್ನ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ. ಆ ತಂದೆ ತಾಯಿ ಗೋಳು ಯಾರಿಗೂ ಬಾರದಿರಲಿ. ನೂರುಕಾಲ ಬಾಳಿ ಬದುಕಬೇಕಿದ್ದ ಮಗಳನ್ನು ಕಳೆದುಕೊಂಡ ತಂದೆ-ತಾಯಿ ಮತ್ತು ಇಡೀ ಕುಟುಂಬದ ದುಃಖದಲ್ಲಿ ನಾನು ಭಾಗಿಯಾಗುತ್ತೇನೆ ಎಂದರು.
ಮುಂದುವರಿದು, ಪುಟ್ಟ ಕಂದಮ್ಮ ಅರಳುವ ಮುನ್ನವೇ ರಕ್ಕಸನ ಅಟ್ಟಹಾಸಕ್ಕೆ ಬಾಡಿಹೊದದ್ದು ದುರಂತ.
ಇದೊಂದು ಪೈಶಾಚಿಕ ಕೃತ್ಯ. ಆರೋಪಿಗೆ ಗರಿಷ್ಠ ಶಿಕ್ಷೆಯಾಗುವಂತೆ ಸರ್ಕಾರ ಹಾಗೂ ಪೋಲಿಸ್ ಇಲಾಖೆ ಎಚ್ಚರ ವಹಿಸಬೇಕು. ಈ ಹೋರಾಟದಲ್ಲಿ ನ್ಯಾಯ ಸಿಗುವವರೆಗೂ ಆ ಕುಟುಂಬದ ಪರವಾಗಿ ಇರುವೆ ಎಂದರು.
ಈ ಸಂದರ್ಭದಲ್ಲಿ ಮಳವಳ್ಳಿ ಶಾಸಕರಾದ ಅನ್ನದಾನಿ ಅವರು, ಮನ್ಮುಲ್ ಅಧ್ಯಕ್ಷರಾದ ಬಿ.ಆರ್.ರಾಮಚಂದ್ರ ಅವರು, ಜೆಡಿಎಸ್ ತಾಲ್ಲೂಕು ಅಧ್ಯಕ್ಷರು ಹಾಗೂ ಮನ್ಮುಲ್ ನಿರ್ದೇಶಕರಾದ ವಿ.ಎಂ. ವಿಶ್ವನಾಥ್ ಅವರು, ಮಂಡ್ಯ ಯುವ ಜನತಾದಳ ಅಧ್ಯಕ್ಷರಾದ ರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅತ್ಯಾಚಾರಕ್ಕೆ ತುತ್ತಾಗಿ ಕೊಲೆಯಾದ ಬಾಲಕಿ ಕುಟುಂಬಕ್ಕೆ ನಿಖಿಲ್ ಕುಮಾರಸ್ವಾಮಿ ಸಾಂತ್ವನ





