ಮಳವಳ್ಳಿ: ಪಟ್ಟಣದಲ್ಲಿ ಅಪ್ರಾಪ್ತ ಬಾಲಕಿಯ ಮೇಲಿನ ಅವಾನುಷ ಕೃತ್ಯವನ್ನು ತಾಲ್ಲೂಕು ವಕೀಲರ ಸಂಘ ಖಂಡಿಸಿ, ಆರೋಪಿ ಪರಯಾವ ವಕೀಲರೂ ವಕಾಲತ್ತು ವಹಿಸದಂತೆ ಖಂಡನಾ ನಿರ್ಣುಯ ಕೈಗೊಂಡಿದೆ.
ಪಟ್ಟಣದ ವಕೀಲರ ಸಂಘದ ಕಚೇರಿಯಲ್ಲಿ ವಕೀಲರ ಸಂಘದ ಎಲ್ಲ ಪದಾಧಿಕಾರಿಗಳು ಬಾಲಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ವಾಡಿ ಶ್ರದ್ಧಾಂಜಲಿ ಸಲ್ಲಿಸಿ ಘಟನೆ ಕುರಿತು ಚರ್ಚೆ ನಡೆಸಿ, ಘಟನೆಯನ್ನು ಖಂಡಿಸಿದ ಪದಾಧಿಕಾರಿಗಳು ಪೊಲೀಸ್ ಇಲಾಖೆ ಎಲ್ಲ ಆಯಾಮದಲ್ಲೂ ತನಿಖೆ ನಡೆಸಿ ಆದಷ್ಟು ಬೇಗ ಆರೋಪಿಗೆ ಶಿಕ್ಷೆ ಕೊಡಿಸುವಂತೆ ಸರ್ವಾನುಮತದಿಂದ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಬಾಲಕಿ ಸಾವಿಗೆ ಕಾರಣವಾದ ಆರೋಪಿುಂ ಪರ ಯಾವ ವಕೀಲರು ವಕಾಲತ್ತು ಹಾಕದಂತೆ ಖಂಡನಾ ನಿರ್ಣುಯ ಕೈಗೊಂಡು ಬಾಲಕಿಯಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಸುಂದರ್ ಸೇರಿದಂತೆ ಎಲ್ಲ ಪದಾಧಿಕಾರಿಗಳು ಹಾಜರಿದ್ದರು.