ಹನೂರು: ಕಳೆದ 1ವಾರದಿಂದ ಸುರಿದ ಭಾರಿ ಮಳೆಗೆ ರೈತರು ಒಬ್ಬರ ಜಮೀನಿನಲ್ಲಿ ಬೆಳೆಯಲಾಗಿದ್ದ ಈರುಳ್ಳಿ ಬೆಳೆಚಕೊಳೆತು ನಷ್ಟವಾಗಿರುವ ಘಟನೆ ತಾಲೂಕಿನ ಬಂಡಳ್ಳಿ ಗ್ರಾಮದ ಹೊರವಲಯದ ಜಮೀನಿನಲ್ಲಿ ನಡೆದಿದೆ.

ತಾಲ್ಲೂಕಿನ ಬಂಡಳ್ಳಿ ಗ್ರಾಮದ ಮಾದೇಶ್ ಎಂಬುವರಿಗೆ ಸೇರಿದ ಜಮೀನಿನಲ್ಲಿ 5 ಎಕರೆಗೆ ಈರುಳ್ಳಿ ಬೆಳೆ ಹಾಕಲಾಗಿತ್ತು. ನಿರಂತರ ಮಳೆಯಿಂದ ಜಮೀನಿನಲ್ಲಿ ನೀರು ತುಂಬಿ ಈರುಳ್ಳಿ ಬೆಳೆ ಕೊಳೆತಿರುವುದರಿಂದ ರೈತ ಕಂಗಾಲಾಗಿದ್ದಾನೆ.
ಗಾಯದ ಮೇಲೆ ಬರೆ: ಮಾರುಕಟ್ಟೆಯಲ್ಲಿ ಈರುಳ್ಳಿಗೆ ಉತ್ತಮ ಬೆಲೆ ಇಲ್ಲದೆ ಇರುವ ದುಸ್ಥಿತಿಯಲ್ಲಿ ಮಳೆಯಿಂದ ಈರುಳ್ಳಿ ಕೊಳೆಯುತ್ತಿರುವುದರಿಂದ ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಈ ಬಗ್ಗೆ ನೊಂದ ರೈತ ಮಹೇಶ್ ಮಾತನಾಡಿ, ಸಾಲ ಮಾಡಿ ನಾವು ಈರುಳ್ಳಿ ಬೆಳೆಯನ್ನು ಬೆಳೆದಿದ್ದವು, ಇನ್ನೇನೋ ಈರುಳ್ಳಿ ಬೆಳೆಯನ್ನು ತೆಗೆದು ಮಾರಾಟ ಮಾಡುವಷ್ಟರಲ್ಲಿ ಎಡೆಬಿಡದೆ ಸುರಿದ ಮಳೆಯಿಂದ ಲಕ್ಷಾಂತರ ರೂ. ಈರುಳ್ಳಿ ಬೆಳೆ ನಷ್ಟ ಉಂಟಾಗಿದ್ದು ದಿಕ್ಕುತೋಚದಂತಾಗಿದೆ. ಸಂಬಂಧಪಟ್ಟ ಇಲಾಖೆಯವರು ಸೂಕ್ತ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿದ್ದಾರೆ.




