ಚಾಮರಾಜನಗರ: ಜಿಲ್ಲೆಯಲ್ಲಿ ಕಳೆದ ೪ ತಿಂಗಳಲ್ಲಿ (ಜೂನ್‌ನಿಂದ ಸೆಪ್ಟೆಂಬರ್) ಮಳೆ-ಪ್ರವಾಹದಿಂದ ಆಗಿದ್ದ ಬೆಳೆ ಹಾನಿಗೆ ೧೦.೫೪ಕೋಟಿ ರೂ. ಪರಿಹಾರ ಬಿಡುಗಡೆಯಾಗಿದೆ.
ಈ ಅವಧಿಯಲ್ಲಿ ೫೧೨೭ಹೆಕ್ಟೇರ್ ಕೃಷಿ ಬೆಳೆಗಳಲ್ಲದೆ ೧೦೮೨ಹೆಕ್ಟೇರ್ ತೋಟಗಾರಿಕೆ ಬೆಳೆಸಹಿತ ಒಟ್ಟು ೬೨೦೯ಹೆಕ್ಟೇರ್ ಬೆಳೆಹಾನಿ ಸಂಭವಿಸಿತ್ತು. ಈ ಪೈಕಿ ೬೦೪೪ಹೆಕ್ಟೇರ್‌ಗೆ ಅಂದರೆ ಶೇ.೯೭ರಷ್ಟು ರೈತರಿಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಪರಿಹಾರಧನ ಬಿಡುಗಡೆಯಾಗಿದ್ದು ಇನ್ನು ಶೇ.೩ರಷ್ಟು ರೈತರಿಗೆ ಪರಿಹಾರ ಬರಬೇಕಿದೆ.




