Mysore
26
scattered clouds

Social Media

ಸೋಮವಾರ, 26 ಜನವರಿ 2026
Light
Dark

ಆರ್. ಎಸ್. ದೊಡ್ಡಿಯಲ್ಲಿ ಶ್ರೀ ಬೆಟ್ಟಳ್ಳಿ ಮಾರಮ್ಮ ನೂತನ ಪಲ್ಲಕ್ಕಿ ಉತ್ಸವ

ಹನೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆರ್.ಎಸ್.ದೊಡ್ಡಿ ಗ್ರಾಮದಲ್ಲಿ ಶ್ರೀ ಬೆಟ್ಟಳ್ಳಿ ಮಾರಮ್ಮನವರ ಕಂಚು ಮತ್ತು ಸ್ಟಿಲ್ ಲೋಹಗಳನ್ನೋಳಗೊಂಡ ನೂತನ ಪಲ್ಲಕ್ಕಿ ಉತ್ಸವ ಲೋಕಾರ್ಪಣೆ ಹಾಗೂ ಪೂಜಾ ಕಾರ್ಯಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿದವು.

ಶ್ರೀ ಮಹದೇಶ್ವರ ದೇವಸ್ಥಾನ ಹಾಗೂ ಜೋಡಿ ಕೆರೆ ಅಶ್ವಥ ಮರದ ಬಳಿ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಿಯ ನೂತನ ಪಲ್ಲಕ್ಕಿ ಉತ್ಸವಕ್ಕೆ ಗ್ರಾಮದ ಅಧಿ ದೇವತೆಯ ಫೋಟೋವನ್ನು ಪ್ರತಿಷ್ಠಾಪಿಸಿ ತ್ರಿಶೂಲ, ಕಳಸ, ಛತ್ರಿ ಚಾಮರರೂಢ ಪಲ್ಲಕ್ಕಿ ಉತ್ಸವಕ್ಕೆ ಶ್ರೀ ಬೆಟ್ಟಳ್ಳಿ ಮಾರಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಪಲ್ಲಕ್ಕಿ ಉತ್ಸವ ಅಲಂಕಾರ ಮತ್ತು ಮೆರವಣಿಗೆ: ಶ್ರೀ ಬೆಟ್ಟಳ್ಳಿ ಮಾರಮ್ಮ ಪಲ್ಲಕ್ಕಿ ಉತ್ಸವವನ್ನು ವೀಳ್ಯದೆಲೆ, ನಿಂಬೆ ಹಣ್ಣು ಹಾಗೂ ವಿವಿಧ ಬಗೆಯ ಪುಷ್ಪಗಳಿಂದ ಸಿಂಗರಿಸಲಾಗಿತ್ತು.

ವಾದ್ಯ ಮೇಳಗಳೊಂದಿಗೆ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಹಿನ್ನಲೆ : ಪ್ರತಿ ವರ್ಷಕೊಮ್ಮೆ ಹನೂರು ಪಟ್ಟಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಜರುಗಲಿರುವ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರ ಮಹೋತ್ಸವ ಅಂಗವಾಗಿ ಸಂಪ್ರದಾಯದಂತೆ ಆರ್. ಎಸ್. ದೊಡ್ಡಿ ಗ್ರಾಮದ ದೊಡ್ಡ ಕೆರೆಯಲ್ಲಿ ದೇವಿಯ ಪಲ್ಲಕ್ಕಿ ಉತ್ಸವ ಸಂಭ್ರಮ ಸಡಗರದಿಂದ ಜರುಗುತ್ತದೆ. ಈ ವೇಳೆ ಆರ್.ಎಸ್.ದೊಡ್ಡಿ ಗ್ರಾಮಸ್ಥರು ದೇವಿಗೆ ಪಲ್ಲಕಿ ಉತ್ಸವವನ್ನು ಬಿದಿರಿನಿಂದ ತಯಾರು ಮಾಡಿ ಪಲ್ಲಕಿ ಉತ್ಸವವನ್ನು ನಡೆಸುತ್ತಾ ಬಂದಿದ್ದರು. ಈ ಬಾರಿ ಗ್ರಾಮಸ್ಥರು ಶಾಶ್ವತವಾದ ಪಲ್ಲಕ್ಕಿ ಉತ್ಸವವನ್ನು ನಿರ್ಮಾಣ ಮಾಡುವ ದಿಸೆಯಲ್ಲಿ ಗ್ರಾಮದ ಎಲ್ಲ ಸಮುದಾಯದ ಜನತೆ ಸೇರಿ ಉತ್ಕೃಷ್ಟವಾದ ಕಂಚು ಹಾಗೂ ಸ್ಟಿಲ್ ಲೋಹದಿಂದ ತಯಾರಾದ ಪಲ್ಲಕ್ಕಿಯನ್ನು ಧಾರ್ಮಿಕ ಪೂಜಾ ಕಾರ್ಯಕ್ಕೆ ಅರ್ಪಿಸುವ ಮೂಲಕ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವರ ಕೃಪೆಗೆ ಪಾತ್ರರಾಗಿದ್ದೇವೆ ಎಂದು ಗ್ರಾಮದ ಮುಖಂಡರು ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!