ಬೆಂಗಳೂರು: ಕಾಶ್ಮೀರದ ರಜೌರಿಯಲ್ಲಿ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಹುತಾತ್ಮರಾದ ಮೈಸೂರು ಮೂಲದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದ್ದು, ಸಾರ್ವಜನಿಕರು ನೂರಾಋಉ ಸಂಖ್ಯೆಯಲ್ಲಿ ಆಗಮಿಸಿ ವೀರ ಯೋಧನಿಗೆ ತಮ್ಮ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.
ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ನಂದನವನ ಬಡಾವಣೆಯ ಅವರ ನಿವಾಸದ ಬಳಿ ಬೆಳಗ್ಗೆ ೭ರಿಂದ ೧೦ ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಂದು ಬೆಳಿಗ್ಗೆ ೧೦.೩೦ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಾಂಜಲ್ ಅವರ ಅಂತಿಮ ದರ್ಶನ ಪಡೆಯಲಿದ್ದಾರೆ.
೧೧.೩೦ರವರೆಗೆ ಮನೆಯ ಬಳಿ ಎಲ್ಲಾ ವಿಧಿ-ವಿಧಾನಗಳು ಮುಗಿದ ನಂತರ, ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ, ಕಲ್ಲುಬಾಳು ಕ್ರಾಸ್, ಜಿಗಣಿ ಒಟಿಐಎಸ್ ವೃತ್ತ, ಉಡುಪಿ ಗಾರ್ಡನ್ ರಿಂಗ್ ರೋಡ್, ಪೊಪ್ಪ ಗೇಟ್ ಮೂಲಕ ಸಾಗಿ ನೈಸ್ ರಸ್ತೆಗೆ ತಲುಪಲಿದೆ. ಬಳಿಕ ಕೂಡ್ಲು ವಿದ್ಯುತ್ ಚಿತಾಗಾರಕ್ಕೆ ಪಾರ್ಥಿವ ಶರೀರವನ್ನು ತರಲಾಗುತ್ತದೆ. ಸೇನಾ ಗೌರವದ ನಂತರ ಅಂತಿಮ ವಿದಿ-ವಿಧಾನಗಳನ್ನು ನೆರವೇರಿಸಲಾಗುತ್ತದೆ.





