Mysore
18
overcast clouds

Social Media

ಮಂಗಳವಾರ, 13 ಜನವರಿ 2026
Light
Dark

ನಿಷ್ಠೆಯಿಂದ ಮಾಡಿದ ಕಾಯಕ ಫಲ ಕೊಟ್ಟೇ ಕೊಡುತ್ತದೆ : ಜಿಲ್ಲಾಧಿಕಾರಿ ರಮೇಶ್

ಹನೂರು: ಯಾವುದೇ ಕಾಯಕವನ್ನು‌ ನಿಷ್ಠೆಯಿಂದ ಮಾಡಿದರೆ ಮುಂದೊಂದ ದಿನ ಅದು ಒಳ್ಳೆಯ ಫಲ ಕೊಟ್ಟೇ ಕೊಡುತ್ತದೆ. ಈ‌ ನಿಟ್ಟಿನಲ್ಲಿ ನೌಕರರು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ರಮೇಶ್ ತಿಳಿಸಿದರು.

ತಾಲ್ಲೂಕಿನ ಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ನೌಕರರ ಸಂಘದ ಮೂರನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
ರಾಜ್ಯ ಹಾಗೂ ಹೊರರಾಜ್ಯಗಳಿಂದ ಪ್ರತಿ ನಿತ್ಯ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಕೆಲಸ ಅತ್ಯಂತ ಪೂಜ್ಯನೀಯವಾದದು. ಇಂದು ಮಾಡುತ್ತಿರುವ ಕಾರ್ಮಿಕರ ಸೇವೆ ಮುಂದೊಂದು ದಿನ ಫಲ ಕೊಡಲಿದೆ. ಆದ್ದರಿಂದ ಪ್ರತಿಯೊಬ್ಬ ಕಾರ್ಮಿಕರು ತಮ್ಮ ಕಾಯಕವನ್ನು ಪ್ರಾಮಾಣಿಕವಾಗಿ‌ ಮಾಡಬೇಕು ಎಂದು ತಿಳಿಸಿದರು.
ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಕಾರ್ಮಿಕರು ಸಂಘಟನೆ ಮೂಲಕ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದರ ಮೂಲಕ ಸೌಲಭ್ಯ ಪಡೆದುಕೊಳ್ಳಬೇಕು. ದಕ್ಷಿಣ ಭಾಗದಲ್ಲಿ ನೆಲೆಸಿರುವ ಮಹದೇಶ್ವರರ ಕ್ಷೇತ್ರದಲ್ಲಿ ಶ್ರದ್ಧಾಭಕ್ತಿಯಿಂದ ಭಕ್ತರ ಸೇವೆ ಮಾಡುವುದರ ಮೂಲಕ ಮಾದರಿಯಾಗಬೇಕು. ಮಾಡುವಕಾಯಕವನ್ನು ಭಕ್ತಿಪೂರ್ವಕವಾಗಿ ಮಾಡಿದರೆ ಅದು ಮಹದೇಶ್ವರರ ಸೇವೆ ಮಾಡಿದಂತೆಯೇ ಇದನ್ನು ಪ್ರತಿಯೊಬ್ಬ ನೌಕರರು ಅಳವಡಿಸಕೊಳ್ಳುವ ಮೂಲಕ ಕಾರ್ಯಶ್ರದ್ಧೆ ಮೆರೆಯಬೇಕು ಎಂದು ತಿಳಿಸಿದರು.
ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿ ದೇವಿ ಮಾತನಾಡಿ, ನಿಮ್ಮಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನೆಲ್ಲಾ ಬದಿಗೊತ್ತಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿರುವುದು ಸಂತಸದ ವಿಚಾರ. ಕಾರ್ಮಿಕರ ಬೇಡಿಕಗಳು ಏನೇ ಇದ್ದರೂ ಅದನ್ನು ಹಂತ ಹಂತವಾಗಿ ಈಡೇರಿಸಲಾಗುವುದು. ನೌಕರರ ಸಂಘಕ್ಕೆ ಕಚೆರಿ ತೆರೆಯಲು ಮುಂದಿನ ದಿನಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು. ಮುಂದಿನ ದಿನಗಳಲ್ಲಿ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರಿಗೆ ನಿಮ್ಮ ಸಿಗುವಂತಾಗಲಿ ಎಂದು ತಿಳಿಸಿದರು.
ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ನೌಕರರ ಸಂಘದ ಅಧ್ಯಕ್ಷ ಮಹದೇವಪ್ರಸಾದ್, ಗ್ರಾ.ಪಂ ಅಧ್ಯಕ್ಷ ಕುಮಾರ್, ಬೇಡಗಂಪಣ ಸಂಘದ ಅಧ್ಯಕ್ಷ ಪುಟ್ಟಣ್ಣ, ತಹಶೀಲ್ದಾರ್ ಆನಂದಯ್ಯ,ಲೆಕ್ಕಾಧೀಕ್ಷಕ ಪ್ರವೀಣ್ ಪಟೇಲ್ ,ಗೌರವಾಧ್ಯಕ್ಷ ಕೆ ಮಹಾದೇವಸ್ವಾಮಿ, ಮುಖ್ಯ ಭಾಷಣಕಾರ ಕಿರಣ್ ರಾಜ್, ಕಾನೂನು ಸಲಹೆಗಾರ ಪ್ರಮೋದ್ , ಪ್ರಧಾನ ಕಾರ್ಯದರ್ಶಿ ವಿ ಮಹದೇವಸ್ವಾಮಿ, ಉಪಾಧ್ಯಕ್ಷ ಪಿ ಮಹದೇವಸ್ವಾಮಿ, ಕೃಷ್ಣಮೂರ್ತಿ ,ಕಾರ್ಯದರ್ಶಿ ರಾಜು, ಸಂಘಟನಾ ಕಾರ್ಯದರ್ಶಿ ಚಿನ್ನಸ್ವಾಮಿ ಖಜಾಂಚಿ ರಾಜಶೇಖರ್ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!