ಮೈಸೂರು: ಸಮಾನ ಮನಸ್ಕರ ತಂಡವು ‘ಸ್ವರಾಂಜಲಿ’ ಸಂಸ್ಥೆ ಮೂಲಕ ಅಜ್ಜ-ಅಜ್ಜಿ ಮತ್ತು ಮೊಮ್ಮಕ್ಕಳ ಭಾವನಾತ್ಮಕ ಸಂಬಂಧಕ್ಕೆ ಬೆಸುಗೆ ಹಾಕಲು ಮುಂದಾಗಿದ್ದು, ಹಿರಿಯ ನಾಗರಿಕರು ಮತ್ತು ಮಕ್ಕಳಿಗೆ ಚೇತೋಹಾರಿ ಮದ್ದು ನೀಡಲು ‘ಹಣ್ಣೆಲೆ-ಚಿಗುರೆಲೆ’ ಶೀರ್ಷಿಕೆಯಡಿ ವಿಶೇಷ ಕಾರ್ಯಕ್ರಮ ಆಯೋಜಿಸಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಟ್ರಸ್ಟ್‌ನ ಮುಖ್ಯಸ್ಥ ಡಾ.ರಘುವೀರ್ ಮಾತನಾಡಿ, ಹಿರಿಯ ಚೇತನರಿಗೆ ಪುಟ್ಟ ಮಕ್ಕಳ ಹಾಗೂ ಪುಟ್ಟ ಮಕ್ಕಳಿಗೆ ಹಿರಿಯ ಚೇತನರ ಅವಶ್ಯಕತೆ, ಅನಿವಾರ್ಯತೆ ಮತ್ತು ದೊರೆಯದಿದ್ದಾಗ ಕಾಡುವ ಅನಿಶ್ಚಿತತೆ ಎಂಬುದರ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ದಾಖಲಿಸಿರುವ ಮೂರು ನಿಮಿಷದ ವಿಡಿಯೋ ಚಿತ್ರೀಕರಿಸಿ ಭಾಷೆ ಸ್ಪರ್ಧೆ ಆೋಂಜಿಸಲಾಗಿದೆ ಎಂದರು.
ಇದರಲ್ಲಿ ೬೦ ಮೇಲ್ಪಟ್ಟವರು ಹಾಗೂ ೧೪ ವರ್ಷದೊಳಗಿನವರು ಪಾಲ್ಗೊಳ್ಳಬಹುದಾಗಿದೆ. ಾಂವುದೇ ಭಾಷೆುಂಲ್ಲಿ ಮೂರು ನಿಮಿಷದ ಒಂದು ವಿಡಿೋಂ ಚಿತ್ರೀಕರಿಸಬೇಕು. ಭಾಷಣ ಓದುವಂತಿಲ್ಲ. ಮೊಬೈಲ್ ಫೋನ್ ನೋಡಿಕೊಂಡು ವಾತನಾಡಬೇಕು. ಬಳಿಕ ವಿಡಿೋಂ ತುಣುಕನ್ನು ಮಕ್ಕಳಾದರೆ ವಾಟ್ಸಾಪ್ ಸಂಖ್ಯೆ ೮೦೯೫೧ ೮೦೧೭೪ಕ್ಕೆ, ಹಿರಿುಂರಾದರೆ ೮೦೯೫೧ ೮೦೩೨೯ ಕ್ಕೆ ಕಳುಹಿಸಬೇಕು. ಕೊನೆ ದಿನಾಂಕ ನವೆಂಬರ್ ೧೫ ಆಗಿದೆ ಎಂದು ತಿಳಿಸಿದರು.
ಜೊತೆಗೆ, ೬೦ ವರ್ಷ ಮೇಲ್ಪಟ್ಟವರಿಗೆ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ನ.೧೩ರಂದು ಬೆಳಿಗ್ಗೆ ೧೦ಕ್ಕೆ ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ವಾದ್ಯ-ಕರೋಕೆ ಅಥವಾ ಯಾವುದೇ ಹಿಮ್ಮೇಳ ಇಲ್ಲದೇ ನಾಲ್ಕು ನಿಮಿಷಗಳ ಅವಧಿಯ ಗಾಯನ ಪ್ರಸ್ತುತ ಪಡಿಸಬಹುದು. ಗಾಯನಕ್ಕೆ ಭಾಷೆಯ ನಿರ್ಬಂಧ ಇರುವುದಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವವರು ವಯಸ್ಸನ್ನು ದೃಢೀಕರಿಸುವ ಆಧಾರ್ ಕಾರ್ಡ್ ಅಥವಾ ಇತರೆ ಯಾವುದಾದರೂ ದಾಖಲೆಯ ಜೆರಾಕ್ಸ್ ಪ್ರತಿ ವಿಳಾಸದ ಮತ್ತು ಮೊಬೈಲ್ ಸಂಖ್ಯೆಯನ್ನು ಮೊ.ಸಂ.9916830019, 6360369624, ಮತ್ತು 998623005 ಗೆ ವಾಟ್ಸ್ ಆಪ್ ಮೂಲಕ ಕಳುಹಿಸಿ ನೋಂದಣಿ ಮಾಡಿಕೊಳ್ಳಬಹುದು ಎಂದು ವಿವರಿಸಿದರು.
ಡಾ.ಲಾವಣ್ಯ ಶೆಣೈ, ರೂಪಶ್ರೀ, ಆನಂದ್ ಮಧ್ವ, ಬಾಳಾಜಿ, ಮೀರಾ, ಶ್ರೀನಿವಾಸ್ ಹಾಜರಿದ್ದರು.





