Mysore
15
scattered clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

ಮನೆಗೆ ಮರಳಿದ ಪ್ರೀತಿಯವರ ತಂದೆ

ಮೈಸೂರು: ಪ್ರೊ. ಪ್ರೀತಿ ಶುಭಚಂದ್ರ ಅವರ ತಂದೆ ಇಂದು ಮಧ್ಯಾಹ್ನ ಸೆಂಟ್ ಫಿಲೋಮಿನ ಚಚ್೯ ಬಳಿಯ ಸತ್ಯನಾರಾಯಣ ದೇವಸ್ಥಾನ ದ ಬಳಿ ಸಿಕ್ಕಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. 

ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ನಿರ್ದೇಶಕರಾದ ಪ್ರೊ.ಪ್ರೀತಿ ಶ್ರೀಮಂಧರಕುಮಾರ್ (ಪ್ರೀತಿ ಶುಭಚಂದ್ರ) ಅವರ ತಂದೆ ಪ್ರೊ. ಎಸ್.ಎ.ಶ್ರೀಮಂಧರಕುಮಾರ್ ನಾಪತ್ತೆಯಾಗಿದ್ದರು ಎಂಬ ಮಾಹಿತಿಯನ್ನು ಕುಟುಂಬದವರು ಎಲ್ಲಾ ಬಂಧು ಮಿತ್ರರಿಗೆ, ಮಾಧ್ಯಮ ಮಿತ್ರರಿಗೆ ತಿಳಿಸಿದ್ದರು. ಹೀಗಾಗಿ ಈ ವರದಿ ಎಲ್ಲರಿಗೂ ಆದಷ್ಟು ಬೇಗ ತಲುಪಿ ಇಂದು ಮಧ್ಯಾಹ್ಣ ಸೆಂಟ್‌ ಫಿಲೋಮಿನ ಚರ್ಚ್‌ ಬಳಿಯ ಸತ್ಯನಾರಾಯಣ ದೇವಸ್ಥಾನದ ಬಳಿ ಸಿಕ್ಕಿದ್ದಾರೆ.  

ಪ್ರೊ. ಪ್ರೀತಿ ಶುಭಚಂದ್ರ ಅವರ ತಂದೆ ಸಿಕ್ಕಿರುವ ಫೋಟೋ ಹಂಚಿಕೊಂಡು, ಈ ವಿಷಯವನ್ನು ಎಲ್ಲೆಡೆ ಹರಡಿಸಿದ್ದಕ್ಕಾಗಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಪೋಸ್ಟ್ ಅನ್ನು ಹಂಚಿಕೊಂಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ವಾಟ್ಸ್‌ಆಪ್‌ ಸ್ಟೇಟಸ್‌ನಲ್ಲಿ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಅವರ ತಂದೆ ಮರಳಿ ಸಿಕ್ಕಿರುವುದರಿಂದ ಆತಂಕಕ್ಕೆ ತೆರೆ ಬಿದ್ದು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!