
ಮೈಸೂರೇ ಸ್ವರ್ಗ
ಮೈಸೂರು ನನ್ನ ನೆಚ್ಚಿನ ಜಾಗ. ನನ್ನ ವಿದ್ಯಾಭಾಸ್ಯ ಇಲ್ಲಿಯೇ ಆಗಿದ್ದು, ಇಲ್ಲಿ ನೆನಪು, ಭಾವನೆಗಳು ಸಾಕಷ್ಟಿವೆ. ಹಾಗಾಗಿ, ಪ್ರತಿ ವರ್ಷ ದಸರಾ ಸಮಯಕ್ಕೆ ಇಲ್ಲಿಗೆ ಬಂದು ಒಂದಷ್ಟು ಮೈಸೂರು ಸುತ್ತಲಿನ ತಾಣಗಳಿಗೆ ಭೇಟಿ ನೀಡುವುದು, ದಸರಾ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡುವುದು ಎಂದರೆ ನನಗೆ ಬಲುಪ್ರಿಯ. ದಸರಾ ಎಂದರೇ ಕೇವಲ ಜಂಬೂ ಸವಾರಿ ಎಂಬ ಬಗ್ಗೆ ಅನೇಕರು ಮಾತನಾಡುತ್ತಾರೆ. ನನಗೆ ಇಲ್ಲಿನ ಬಣ್ಣ ಬಣ್ಣದ ದೀಪಾಲಾಂಕಾರದ ನಡುವೆ ಸಂಚಾರ ಮಾಡುವುದೆಂದರೆ ಎಲ್ಲಿಲ್ಲದ ಆಸೆ. ಮೈಸೂರೇ ಸ್ವರ್ಗ.
–ಜಯಪ್ರಧ, ಖಾಸಗಿ ಕಂಪೆನಿ ಉದ್ಯೋಗಿ, ಬೆಂಗಳೂರು
————————

ಜಂಬೂ ಸವಾರಿ ನೋಡುವುದೇ ಧನ್ಯತೆ
ಮೈಸೂರು ದಸರಾ, ಜಂಬೂ ಸವಾರಿ ಇಲ್ಲಿನ ಇತಿಹಾಸ, ವೈಭವದ ಬಗ್ಗೆ ಸಾಕಷ್ಟು ಕೇಳಿದ್ದೆ. ಆದರೆ, ಪ್ರತ್ಯಕ್ಷವಾಗಿ ನೋಡುವ, ಸುತ್ತಾಡುವ ಅವಕಾಶಗಳು ಸಿಕ್ಕಿದ್ದು ಕಡಿಮೆಯೇ, ನಾನು ಮೈಸೂರಿನ ಹುಡುಗಿಯನ್ನು ಮದುವೆಯಾದ ನಂತರ ಪ್ರತಿ ವರ್ಷ ದಸರಾ ದಿನಗಳನ್ನು ಇಲ್ಲಿ ಕಳೆಯುತ್ತಾ ಆನಂದಿಸುತ್ತೇನೆ. ಸಾಧ್ಯವಾದಷ್ಟು ಎಲ್ಲ ಕಾರ್ಯಕ್ರಮಗಳನ್ನು ಮತ್ತು ಸ್ಥಳಗಳನ್ನು ನೋಡಲು ಸಮಯ ಮಾಡಿಕೊಳ್ಳುತ್ತೇನೆ. ಆನೆಗಳು ಚಾಮುಂಡೇಶ್ವರಿಯ ವಿಗ್ರಹವನ್ನು ಹೊತ್ತು ಸಾಗುವುದನ್ನು ನೋಡುವುದೇ ಧನ್ಯತೆ.
–ಪ್ರಭ್ಜೋತ್ ಸಿಂಗ್, ಖಾಸಗಿ ಕಂಪೆನಿ ನೌಕರ, ಅಮೃತಸರ್, ಪಂಜಾಬ್





