Mysore
29
few clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ಪ್ರತಾಪ್‌ ಸಿಂಹ 2ಲಕ್ಷ ಮತಗಳಿಂದ ಸೋಲುತ್ತಾರೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌

ಮೈಸೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್‌ ಸಿಂಹಾ ೨ಲಕ್ಷ ಮತಗಳಿಂದ ಸೋಲುವುದು ಖಚಿತ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಹೇಳಿದ್ದಾರೆ.

ನಗರದ ಕಾಂಗ್ರೆಸ್‌ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು-ಕೊಡುಗು ಸಂಸದ ಪ್ರತಾಪ್‌ ಸಿಂಹ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 2ಲಕ್ಷ ಮತಗಳಿಂದ ಗೆಲ್ಲುವುದಾಗಿ ಹೇಳಿದ್ದಾರೆ. ಆದರೇ ಅದೇ 2ಲಕ್ಷ ಮತಗಳ ಅಂತರದಲ್ಲಿ ಸೋಲುತ್ತಾರೆ ಎಂದು ಹೇಳಿದ್ದಾರೆ.

ಈಗಾಗಲೇ ಸೋಲಿನ ಭೀತಿಯಿಂದ ಸಂಖ್ಯಾಶಾಸ್ತ್ರದಕ್ಕೆ ಅನುಗುಣವಾಗಿ ಪ್ರತಾಪ್‌ ಸಿಂಹ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಅಲ್ಲದೆ ಕಾಂಗ್ರೆಸ್‌ ಪಕ್ಷದ ಅವಧಿಯಲ್ಲಿ ತಂದ ಯೋಜನೆಗಳನ್ನು ನಾನು ತಂದೆ ನಾನು ತಂದೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಕೇಂದ್ರದಿಂದ ನೀವು ತಂದ ಯೋಜನೆಗಳನ್ನು ಹೇಳಿ ಎಂದರು.

ಮೈಸೂರು-ಕುಶಾಲನಗರ ಹೈವೆ ಕಾಮಗಾರಿ ಏನಾಯ್ತು?ನಾಗನಹಳ್ಳಿ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಏನಾಯ್ತು? ನಿಮ್ಮಿಂದ ರಾಜ್ಯಕ್ಕೆ ಯಾವ ಅಭಿವೃದ್ಧಿ ಕೆಲಸ ಆಗಿದೆ ಎಂಬುದರ ಬಗ್ಗೆ ಒಂದು ಪಟ್ಟಿ ಕೊಡಿ ಎಂದು ಸವಾಲು ಎಸೆದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!