ಮೈಸೂರು: ವಿ.ವಿ.ಮೊಹಲ್ಲಾ ವಿಭಾಗ ವ್ಯಾಪ್ತಿಯ ೧೧ ಕೆ.ವಿ ಕೋಟೆಹುಂಡಿ ಎನ್‌ಜೆವೈ, ೧೧ ಕೆ.ವಿ ಮಹದೇವಪುರ ಮತ್ತು ೧೧ ಕೆ.ವಿ ಗೋಕುಲಂ ವಿದ್ಯುತ್ ಮಾರ್ಗಗಳಲ್ಲಿ ತುರ್ತು ನಿರ್ವಹಣಾ ನಿಮಿತ್ತ ನ.೧೪ರಂದು ಬೆಳಿಗ್ಗೆ ೧೦ರಿಂದ ಸಂಜೆ ೬ಗಂಟೆವರೆಗೆ ಕೆಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯುಯವಾಗಲಿದೆ.
ಕೋಟೆಹುಂಡಿ, ಕೆಎಸ್‌ಆರ್‌ಟಿಸಿ ಲೇಔಟ್, ರಾಯನಕೆರೆ, ಕಳಲವಾಡಿ, ಯಡಹಳ್ಳಿ, ಗೂರೂರು, ಮಹದೇವಪುರ, ಶಿವಪುರ, ರಮಾಬಾಯಿ ನಗರ, ಪರಸಯ್ಯನ ಹುಂಡಿ, ಶ್ರೀರಾಂಪುರ ೨ನೇ ಹಂತ, ಗೊರೂರು, ಮುನಿಸ್ವಾಮಿ ನಗರ, ಹಳ್ಳಿ ಶ್ರೀರಾಂಪುರ, ಮಹದೇಶ್ವರ ಬಡಾವಣೆ, ತ್ರಿನೇತ್ರ ವೃತ್ತ, ಗೋಕುಲಂ ೨ನೇ ಹಂತ, ಕಾಂಟೂರು ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ವಿ.ವಿ. ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





