Mysore
27
broken clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

ಅಂಚೆ ಇಲಾಖೆಯಿಂದ ಭಾರಿ ಮೊತ್ತದ ಅಪಘಾತ ವಿಮೆ

ಮೈಸೂರು: ಅಂಚೆ ಇಲಾಖೆಯು ಸಿಹಿ ಸುದ್ದಿಯೊಂದನ್ನು ನೀಡಿದೆ.
ಹೌದು. 18 ರಿಂದ 25 ವರ್ಷದೊಳಗಿನವರು ವಾರ್ಷಿಕವಾಗಿ 399 ರೂಗಳನ್ನು  ಪಾವತಿ  ಮಾಡಿದರೆ, 10ಲಕ್ಷ ರೂಪಾಯಿಗಳ ಅಪಘಾತ ವಿಮೆ ಅನುಕೂಲವನ್ನುಪಡೆಯಬಹುದಾಗಿದೆ. ಈ ಮೂಲಕ ಅಂಚೆ ಇಲಾಖೆಯು ಆಕಸ್ಮಿಕ ಅವಘಡಗಳಿಗೆ ತುತ್ತಾಗುವ ಜನಸಾಮಾನ್ಯರಿಗೆ ನೆರವು ನೀಡಲು ಮುಂದಾಗಿದೆ.

ಈ ವಿಮೆಯು ಫಲಾನುಭವಿಗಳು ಆಕಸ್ಮಿಕವಾಗಿ ಅಪಘಾತಕ್ಕೆ ತುತ್ತಾದರೆ ಅಥವಾ ಅಂಚೆ ಇಲಾಖೆಯು ಸೂಚಿಸಿರುವ ಅವಘಡದ ಸನ್ನಿವೇಶಗಳಿಗೆ ಒಳಗಾದರೆ ಆರ್ಥಿಕ ನೆರವು ಸಿಗಲಿದೆ.
ಈ ವಿಮಾ ಯೋಜನೆಯು ಫಲಾನುಭವಿ ಆಕಸ್ಮಿಕವಾಗಿ ಸಾವನ್ನಪ್ಪಿದ್ದರೆ ಅವರ ಕುಟುಂಬಸ್ಥರಿಗೆ ವಿಮೆ ಮೊತ್ತ, ಶಾಶ್ವತ ಅಂಗವೈಕಲ್ಯವಾದರೆ ಆರ್ಥಿಕ ಸಹಾಯ, ಆಸ್ಪತ್ರೆ ಖರ್ಚು ವೆಚ್ಚ ಸಿಗಲಿದೆ. ಅಲ್ಲದೆ, ಮೃತರ ಮಕ್ಕಳ ಶಿಕ್ಷಣಕ್ಕಾಗಿ ನೆರವು ದೊರಕಲಿದೆ.  ಈ ಸಂಬಂಧ ಸಮೀಪದ ಅಂಚೆ ಕಚೇರಿಯಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ ಖಾತೆ ತೆರೆದು ಈ ವಿಮಾ ಯೋಜನೆ ಲಾಭ ಪಡೆದುಕೊಳ್ಳಬಹುದೆಂದು ತಿಳಿಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!