Mysore
19
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಚೈಲ್ಡ್ ಪೋರ್ನೋಗ್ರಫಿ ಸರ್ಚ್ ಮಾಡೀರಾ ಜೋಕೆ!

ಮೈಸೂರು ಜಿಲ್ಲೆಯಲ್ಲಿ ಎರಡು ಪ್ರಕರಣ ದಾಖಲು

ಬಿ.ಎನ್.ಧನಂಜಯಗೌಡ

ಮೈಸೂರು : ಮಕ್ಕಳಿಗೆ ಸಂಬಂಧಿಸಿದ ಅಶ್ಲೀಲ ಚಿತ್ರಗಳನ್ನು (child pornography) ನೋಡಿದರೆ ಮಾತ್ರವಲ್ಲ, ಆ ವಿಡಿಯೋಗಳ ಸರ್ಚ್ ಮಾಡಿದರು ಕೂಡ ಸಿಕ್ಕಿ ಬೀಳ್ತೀರಾ! ಹೌದು…ಇಂತಹದ್ದೆ ಎರಡು ಪ್ರಕರಣಗಳು ಮೈಸೂರು ಜಿಲ್ಲೆಯಲ್ಲಿ ಪತ್ತೆಯಾಗಿವೆ.

ಮಕ್ಕಳ ಸಂಬಂಧಿ ಅಶ್ಲೀಲ ವಿಡಿಯೋಗಳ ವಿಕ್ಷಣೆ, ಡೌನ್ಲೋಡ್, ಶೇರ್ ಮಾಡುವುದು ಗೂಗಲ್ ಸೇರಿದಂತೆ ಯಾವುದೇ ಅಂತರ್ಜಾಲದಲ್ಲಿ ಸರ್ಚ್ ಮಾಡಿದರೂ ಕಾನೂನು ಕ್ರಮಕ್ಕೆ ಒಳಗಾಗಬೇಕಾಗುತ್ತದೆ. ಇಂತಹ ಗೀಳಿದ್ರೆ ಬಿಡೋದು ವಾಸಿ.

ಮೈಸೂರು ಜಿಲ್ಲೆಯ ಇಬ್ಬರು ಯುವಕರು ಮಕ್ಕಳಿಗೆ ಸಂಬಂಧಿಸಿದ ಅಶ್ಲೀಲ ಚಿತ್ರಗಳಿಗಾಗಿ ಹುಡುಕಾಡಿರುವ ಮತ್ತು ವೀಕ್ಷಣೆ ಮಾಡಿರುವ ಸಂಬಂಧದ ಮಾಹಿತಿ ‘ನ್ಯಾಷನಲ್ ಸೆಂಟರ್ ಫಾರ್ ಮಿಸ್ಸಿಂಗ್ ಆ್ಯಂಡ್ ಎಕ್ಸಾಫ್ಲಾಯ್ಟೆಡ್ ಚಿಲ್ಡ್ರನ್ (ಎನ್‌ಸಿಎಂಇಸಿ) ಸೆಂಟರ್‌ಗೆ’ ರವಾನೆಯಾಗಿದ್ದು, ಈ ಕೇಂದ್ರದಿಂದ ಮಾಹಿತಿ ಒಳಗೊಂಡಿರುವ ಸೈಬರ್ ಟಿಪ್ ಲೈನ್ ರಿಪೋರ್ಟ್ ಸಿಡಿಯನ್ನು ಎನ್‌ಸಿಆರ್‌ಬಿ ಅವರಿಂದ ಅಂಚೆ ಮೂಲಕ ಮೈಸೂರು ಜಿಲ್ಲಾ ಸೆನ್ ಠಾಣೆಗೆ ಕಳುಹಿಸಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ.

ಎಲ್ಲಿ ಸರ್ಚ್ ಮಾಡಿದ್ರು ಸಿಕ್ಕಿ ಬೀಳೋದೆ : ದೇಶದ ಯಾವುದೇ ಭಾಗದಲ್ಲಿ ಮೊಬೈಲ್, ಡೆಸ್ಕ್ ಟಾಪ್‌ಗಳಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳ ವಿಡಿಯೋ ಸರ್ಚ್ ಮಾಡಿದರೂ, ಈ ಮಾಹಿತಿ ಕೂಡಲೇ ದೆಹಲಿಯಲ್ಲಿ ಇರುವ ‘ನ್ಯಾಷನಲ್ ಸೆಂಟರ್ ಫಾರ್ ಮಿಸ್ಸಿಂಗ್ ಆ್ಯಂಡ್ ಎಕ್ಸಾಫ್ಲಾಯ್ಟೆಡ್ ಚಿಲ್ಡ್ರನ್ (ಎನ್‌ಸಿಎಂಇಸಿ) ಸೆಂಟರ್‌ಗೆ’ ಗೊತ್ತಾಗುತ್ತದೆ. ಇಲ್ಲಿ ದಾಖಲಾಗುವ ಐಪಿ ಅಡ್ರೆಸ್ ಆಧರಿಸಿ ವ್ಯಕ್ತಿಯ ವಿಳಾಸ ಹುಡುಕಿ ಅದನ್ನು ಸಂಬಂಧಿತ ವ್ಯಾಪ್ತಿಯ ಪೊಲೀಸ ಠಾಣೆಗೆ ಸೈಬರ್ ಟಿಪ್ ಲೈನ್ ರಿಪೋರ್ಟ್ ಸಿಡಿಯನ್ನು ಎನ್‌ಸಿಆರ್‌ಬಿ ಮೂಲಕ ಕಳಿಸಲಾಗುತ್ತದೆ.

ಕೆಟ್ಟ ಗೀಳು : ಇತ್ತೀಚಿಗೆ ಅಶ್ಲೀಲ ಚಿತ್ರ ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಕೆಲವರಿಗೆ ಮಕ್ಕಳ ಅಶ್ಲೀಲ ಚಿತ್ರಗಳನ್ನು ನೋಡುವುದು ಗೀಳಾಗಿದೆ. ಇದು ಡ್ರಗ್ಸ್ ಸೇವನೆಯಂತೆಯೇ ಆಗಿದ್ದು, ಕೆಲವರು ಅಡಿಕ್ಟ್ ಆಗಿ ಬಿಡುತ್ತಾರೆ. ಅತ್ಯಂತ ಕೆಟ್ಟ ಚಟವಾಗಿದ್ದು, ಇತ್ತಿಚಿನ ದಿನಗಳಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಅಶ್ಲಿಲ ವಿಡಿಯೋಗಳನ್ನು ನೋಡುತ್ತಿರುವುದು ಕಂಡುಬಂದಿದೆ. ಇದರಿಂದಾಗಿ ಸಮಾಜದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇದನ್ನು ತಡೆಯಲು ಕೇಂದ್ರ ಸರ್ಕಾರವೇ ಕಠಿಣ ಕಾನೂನು ರೂಪಿಸಿದೆ.

ಶಿಕ್ಷೆ: ಐಟಿ ಕಾಯಿದೆ ೬೭ ಬಿ ಪ್ರಕಾರ ೫ ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ೧೦ ಲಕ್ಷ ರೂ.ವರೆಗೆ ದಂಡ ವಿಧಿಸಬಹುದು. ಮಕ್ಕಳ ಅಶ್ಲಿಲ ವಿಡಿಯೋ, ಫೋಟೊಗಳ ವಿಕ್ಷಣೆ, ಡೌನ್ಲೋಡ್ ಮಾಡುವುದು ಹಾಗೂ ಶೇರ್ ಮಾಡುವುದರ ಜತೆಗೆ ಅವುಗಳಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹುಡುಕುವುದು ಶಿಕ್ಷಾರ್ಹ ಅಪರಾಧ ಎನ್ನುತ್ತಾರೆ ಪೊಲೀಸ್ ಅಧಿಕಾರಿಯೊಬ್ಬರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!