Mysore
17
broken clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

‘ಬಡತನದಿಂದ ಸಾಧನೆ ಅಸಾಧ್ಯ ಎಂಬ ಕೀಳರಿಮೆ ಬೇಡ’

ಮೈಸೂರು: ಬಡತನದಿಂದ ಸಾಧನೆ ಅಸಾಧ್ಯ ಎಂಬ ಕೀಳರಿಮೆ ಬೇಡ. ಅವಮಾನ, ಬಡತನವನ್ನು ಸಹಿಸಿಕೊಂಡು ಓದಿದವರು, ದುಡಿದವರು ಜೀವನದಲ್ಲಿ ಎತ್ತರಕ್ಕೆ ಬೆಳೆದು ಸಾಧನೆ ಮಾಡಿದ್ದಾರೆ ಎಂದು ಕ್ಲಾಸಿಕ್ ಎಜುಕೇಷನ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಎಸ್.ಉಪ್ಪಾರ್ ತಿಳಿಸಿದರು.
ಮೈಸೂರು ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿಪರರ ಸಂಘದ ವತಿಯಿಂದ ನಗರದ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ೨೭ನೇ ವಾರ್ಷಿಕ ಪ್ರತಿಭಾ ಪುರಸ್ಕಾರ, ನಿವೃತ್ತ, ಬಡ್ತಿ ಹೊಂದಿದ ಅಧಿಕಾರಿಗಳು ಹಾಗೂ ನೌಕರರು, ಸಾಧಕರು ಹಾಗೂ ಸಮಾಜ ಸೇವಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಮುಖದಲ್ಲಿ ಸೌಂದರ್ಯ ಕಾಣಬೇಕೆಂದರೆ ನಾವು ಮಾಡುವ ಕೆಲಸದಲ್ಲಿ ಸೌಂದರ್ಯವಿರಬೇಕು. ಸಮಾಜ ವ್ಯಕ್ತಿಯನ್ನು ಗುರು ತಿಸುವುದು ಆತನ ಸೌಂದರ್ಯದಿಂದಲ್ಲ. ಆತನ ವ್ಯಕ್ತಿತ್ವ ಹಾಗೂ ಮಾಡುವ ಸಾಧನೆಯಿಂದ. ಆ ರೀತಿಯಾಗಿ ಸಾಧಿಸಬೇಕು ಎಂದು ಸಲಹೆ ನೀಡಿದರು.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಭಗೀರಥ ಮಠದ ಪೀಠಾಧಿಪತಿ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ, ಮಳವಳ್ಳಿ ತಾಲ್ಲೂಕಿನ ಅಯ್ಯನ ಸರಗೂರು ಮಠದ ಮಹದೇವ ಸ್ವಾಮಿ, ಉಪ ಮಹಾಪೌರರಾದ ಡಾ.ರೂಪ, ಮುಡಾ ಮಾಜಿ ಅಧ್ಯಕ್ಷ ಎಚ್.ಎನ್.ವಿಜಯಕುಮಾರ್, ಮೈಸೂರು ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿಪರರ ಸಂಘದ ಅಧ್ಯಕ್ಷ ಜವರಶೆಟ್ಟಿ, ಆದಾಯ ತೆರಿಗೆ ಇಲಾಖೆ ಉಪನಿರ್ದೇಶಕ ಲಕ್ಕಪ್ಪ ಹನುಮಣ್ಣನವರ್, ಎನ್ಷಿಯೆಂಟ್ ಸಾಲ್ಟ್ ಮೇಕರ್ಸ್‌ ಫೆಡರೇಷನ್ ಪದಾಧಿಕಾರಿ ಶ್ರೀರಾಮುಲು ಸಾಗರ, ಪ್ರೊ.ಎನ್.ಕೆ.ಇಪ್ಪಾರ್ ಕರ್, ಹರೀಶ್ ಚೌವ್ಹಾನ್ ಮಹತೋ, ಜಯಂತ್ ಸಾಗರ್, ಮುಖಂಡರಾದ ಎಸ್.ಬಸವರಾಜಪ್ಪ, ಹನುಮಂತಶೆಟ್ಟಿ, ವಿ.ಎಸ್.ವಿಷಕಂಠಯ್ಯ ಮತ್ತಿತರರು ಹಾಜರಿದ್ದರು.
ಪ್ರಶಸ್ತಿ ಪುರಸ್ಕೃತರು: ಅಂಶು ಐಸಿರಿ, ಯು.ಎಚ್.ನಿಶ್ಚಿತ, ಆರ್.ಅಭಯ್ ಕೃಷ್ಣ, ಆರ್.ಶ್ರೀವಲ್ಲಿ, ಸಿ.ನಿರೂಪಮ, ಎನ್.ವರ್ಷ, ನಂದಿನಿ, ಬಿ.ಎಲ್.ಸಿದ್ದರಾಜು, ಮಾನಸ ಅವರಿಗೆ ಶ್ರೀಭಗೀರಥ ವಿದ್ಯಾಶ್ರೀ, ಟಿ.ಕೀರ್ತಿ ಕುಮಾರ್, ಆರ್.ಲಕ್ಷ್ಮೀ ಅವರಿಗೆ ಶ್ರೀಭಗೀರಥ ಸ್ಪರ್ಧಾವಿಜೇತ ರತ್ನ, ವಿ.ವಿಕ್ರಮ್ ಯೋಗಿ ಅವರಿಗೆ ಶ್ರೀಭಗೀರಥ ಯೋಗಶ್ರೀ, ಆರ್.ಗೌತಮ್ ಅವರಿಗೆ ಶ್ರೀಭಗೀರಥ ಕಲಾರತ್ನ, ಯಶವಂತ್ ಅವರಿಗೆ ಶ್ರೀಭಗೀರಥ ಕ್ರೀಡಾರತ್ನ, ಕೆ.ಬಿ.ಯೋಗೇಶ್, ಗೋಪಾಲಶೆಟ್ಟಿ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!