ಹನಗೋಡು:
ಆನೆಚೌಕೂರು ವಲುಂದ ಮತ್ತಿಗೋಡು ಆನೆ ಶಿಬಿರದಲ್ಲಿರುವ ಗಣೇಶ, ಸೂರ್ಯ, ಮಣಿಕಂಠ, ಬಲರಾಮ, ಮಹಾರಾಷ್ಟ್ರದ ಸಾಕಾನೆ ಭೀವಾ ಸೇರಿದಂತೆ ಅರಣ್ಯ ಇಲಾಖೆಯ ಸಫಾರಿ ಹಾಗೂ ಗಸ್ತು ವಾಹನಗಳಿಗೆ ವಿಶೇಷ ಪೂಜೆ ಸಲ್ಲಿಸಿ ಸಂಪ್ರದಾಯದಂತೆ ಸಾಕಾನೆಗಳಿಗೆ ಕಬ್ಬು, ಬಾಳೆಹಣ್ಣು, ತೆಂಗಿನ ಕಾಯಿಯ ಫಲಾತಾಂಬೂಲ ನೀಡಿದರು.
ಈ ವೇಳೆ ಆನೆ ಚೌಕೂರು ವಲಯದ ಆರ್‌ಎಫ್‌ಒ ಗಣರಾಜ್ ಪಟಗಾರ್, ಸಾಕಾನೆ ಶಿಬಿರದ ಮೇಲ್ವಿಚಾರಕಿ ಶಾರದಮ್ಮ, ಡಿಆರ್‌ಎಫ್‌ಒ ವಿನೋದ್, ಮನೋಹರ್, ನಂದಕುವಾರ್, ಸಿಬ್ಬಂದಿ ವರ್ಗ ಹಾಜರಿದ್ದರು.





