Mysore
26
scattered clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ರಾಜಕೀಯ ತೊರೆದರೂ ಮಂಡ್ಯ ಬಿಡಲಾರೆ: ಸಂಸದೆ ಸುಮಲತಾ

ಮಂಡ್ಯ: ಮಂಡ್ಯ ಅಂಬರೀಶ್ ಅವರ ಕರ್ಮಭೂಮಿ ಹಾಗಾಗಿ ರಾಜಕೀಯ ಬಿಟ್ಟರೂ ಮಂಡ್ಯವನ್ನು ಬಿಡಲ್ಲ ಎಂದು ಸಂಸದೆ ಸುಮಲತಾ ಸ್ಪಷ್ಟಪಡಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ” ಹೊಸ ಕ್ಷೇತ್ರ ಹುಡುಕುತ್ತಿರುವವರು ಯಾರು ಅಂತ ಗೊತ್ತಿಲ್ಲ. ಸುಮಲತಾ ಮಂಡ್ಯ ಬಿಟ್ಟು ಹೋಗುತ್ತಾರೆ ಎಂದು ಒಂದಷ್ಟು ಜನ ಕನಸು ಕಾಣುತ್ತಿದ್ದಾರೆ. ನಾನು ಕ್ಷೇತ್ರ ಬಿಟ್ಟು ಹೋಗಲ್ಲ ಎನ್ನುವುದು ಅವರ ಕನಸಿಗೆ ನೀರು ಚೆಲ್ಲಿದಂತಾಗಿರಬಹುದು” ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.

ನಾನು ರಾಜಕೀಯಕ್ಕೆ ಬಂದಿರುವುದು ಮಂಡ್ಯ ಜನಕ್ಕೋಸ್ಕರ. ರಾಜಕೀಯದಿಂದ ಏನೇನೋ ಆಗಲು ಬಂದಿಲ್ಲ. ರಾಜಕೀಯದಲ್ಲಿ ಬೇಕಿದ್ರೆ ಇಂದು ಇರುತ್ತೇನೆ, ನಾಳೆ ಬಿಡುತ್ತೇನೆ, ಆದರೆ ಮಂಡ್ಯ ಮಾತ್ರ ಬಿಡಲ್ಲ ಎಂದು ಸ್ಪಷ್ಟಪಡಿಸಿದರು.

ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ನನ್ನನ್ನು ಬೆಂಬಲಿಸಿದ್ದಾರೆ. ಯಾರ ಪರ, ವಿರೋಧ ಎಂಬ ಧೋರಣೆ ಅನುಸರಿಸದೆ ತಟಸ್ಥವಾಗಿರುವುದು ಒಳ್ಳೆಯದು. ಯಾರಿಗೂ ಕೂಡ ನೋಯಿಸಬಾರದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಭಿಷೇಕ್‌ ರಾಜಕೀಯ ಪ್ರವೇಶದ ನಿರ್ಧಾರ ನನ್ನದಲ್ಲ
ಅಭಿಷೇಕ್‌ ರಾಜಕೀಯ ಪ್ರವೇಶದ ನಿರ್ಧಾರ ನನ್ನದಲ್ಲ
ವಿಧಾನ ಸಭಾ ಚುನಾವಣೆಯಲ್ಲಿ ನಾನೇನು ಸ್ಪರ್ಧಿಸುವುದಿಲ್ಲ. ನಾನು ಯಾರಿಗೆ ಬೆಂಬಲ ಕೊಡಬೇಕು ಎನ್ನುವುದು ಮುಂದೆ ನೋಡೋಣ. ಇನ್ನೂ ಯಾರ್ಯಾರು ಕ್ಯಾಂಡಿಡೇಟ್ಸ್ ಎನ್ನುವುದೇ ಗೊತ್ತಿಲ್ಲ. ಈಗಲೇ ನಾನು ಯಾರಿಗೆ ಅಂತ ಬೆಂಬಲ ಸೂಚಿಸಲಿ ಎಂದು ಪ್ರಶ್ನಿಸಿದರು.

ರಾಜಕೀಯಕ್ಕೆ ಬರಬೇಕೋ ಬೇಡವೋ ಎಂಬುದನ್ನು ಅಭಿಷೇಕ್ ಅಂಬರೀಶ್ ಅವರೇ ನಿರ್ಧರಿಸುತ್ತಾರೆ. ಇದರಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಈಗ ಸದ್ಯಕ್ಕೆ ಅವನು ಎರಡು ಮೂರು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾನೆ. ಅವರ ರಾಜಕೀಯ ಭವಿಷ್ಯವನ್ನು ಅವನೇ ಡಿಸೈಡ್ ಮಾಡಬೇಕು ಎಂದು ಉತ್ತರಿಸಿದರು.

ಜಿಲ್ಲೆ ಅಭಿವೃದ್ಧಿಗೆ 300 ಕೋಟಿ ರೂ.ಗೆ ಬೇಡಿಕೆ
ಮಂಡ್ಯ ಜಿಲ್ಲೆಯಲ್ಲಿರುವ ಹಲವಾರು ರಸ್ತೆಗಳು ಹಾಳಾಗಿವೆ, ಕೆರೆಗಳ ಅಭಿವೃದ್ಧಿ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ 300 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೆ, ಖುದ್ದು ಭೇಟಿ ಮಾಡಿಯೂ ಚರ್ಚೆ ನಡೆಸಿ ಮನವಿ ಮಾಡಿದ್ದೆ. ಅವರೂ ಸಹ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು. ಅದು ಕಾರ್ಯರೂಪಕ್ಕೆ ಬರಬೇಕಷ್ಟೇ ಎಂದು ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!