ಮೈಸೂರಿನಲ್ಲಿರುವ ವಿಮಾನ ನಿಲ್ದಾಣದಲ್ಲಿ ಕಳೆದ ಒಂದು ತಿಂಗಳಿನಿಂದ ಲೇಸರ್ ಲೈಟ್ ಕಿರಿಕಿರಿ ಎದುರಾಗಿರುವ ಸುದ್ದಿ ಬೆಳಕಿಗೆ ಬಂದಿದೆ. ರಾತ್ರಿ ವೇಳೆ ವಿಮಾನವನ್ನು ಇಳಿಸುವ ಹಾಗೂ ಟೇಕ್ ಆಫ್ ಮಾಡುವ ಸಂದರ್ಭದಲ್ಲಿ ಕಿಡಿಗೇಡಿಗಳು ಲೇಸರ್ ಲೈಟ್ ಅನ್ನು ಪೈಲಟ್‌ನತ್ತ ಬಿಟ್ಟು ಕಿರಿಕಿರಿ ಉಂಟು ಮಾಡಿದ್ದಾರೆ.
ಮರಸೆ ಗ್ರಾಮ ಹಾಗೂ ಮಂಡಕಳ್ಳಿ ಗ್ರಾಮದ ದಿಕ್ಕಿನಿಂದ ಈ ಲೇಸರ್ ಲೈಟ್ ಬರುತ್ತಿದೆ ಎಂಬ ಮಾಹಿತಿಯನ್ನು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಫೋಟೊ ಸಮೇತ ಪೊಲೀಸರಿಗೆ ನೀಡಿ ಕಿರುಕುಳ ತಪ್ಪಿಸುವಂತೆ ಮನವಿ ಮಾಡಿದ್ದಾರೆ.





