ಚಾಮರಾಜನಗರ : ಭಾರತ ಜೋಡೊ ಯಾತ್ರೆಯಲ್ಲಿ paycm ಟೀ ಶರ್ಟ್ ಧರಿಸಿ ಬಾವುಟವನ್ನು ಹಿಡಿದು ಯಾತ್ರೆಯಲ್ಲಿ ನೆನ್ನೆ ದಿನ ಪಾಲ್ಗೊಂಡಿದ್ದ ವಿಜಯಪುರ ಮೂಲದ ಅಕ್ಷಯ್ ಕುಮಾರ್ ಎಂಬಾತನನ್ನು ಎರಡನೇ ದಿನಕ್ಕೆ ಕಾಲಿಟ್ಟಿರುವ ಈ ದಿನದ ಯಾತ್ರೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ ಶಿವಕುಮಾರ್ ನೇತೃತ್ವದಲ್ಲಿ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದಲ್ಲಿ ಯುವಕನನ್ನು ಬಂಧಿಸಲಾಗಿದೆ.
ಬಂಧಿತ ಅಕ್ಷಯ್ ಕುಮಾರ್ ನೆನ್ನೆ ದಿನ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರ ಇರುವ ಟೀ ಶರ್ಟ್ ಧರಿಸಿ ಮುಖ್ಯ ಮಂತ್ರಿಗಳಿಗೆ ಅವಮಾನ ಮಾಡಿದ್ದನೆಂಬ ಆರೋಪದ ಮೇಲೆ ಈತನ ವಿರುದ್ಧ ಚಾಮರಾಜನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆ ಪ್ರಕರಣವನ್ನು ದಾಖಲಿಸಲಾಗಿತ್ತು.





