ಮೈಸೂರು : ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಓಬಿಸಿ ಮೋರ್ಚಾ ತಂಡದ ವತಿಯಿಂದ ಸೇವಾ ಪಾಕ್ಷಿಕ ಅಂಗವಾಗಿ ಅರಳಿ ಮರ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ವಾರ್ಡ್ ನಂಬರ್ 30 ರಲ್ಲಿ ಕ್ಯಾತಮಾರನಹಳ್ಳಿ ಗಾಯತ್ರಿ ಪುರಂ ನಲ್ಲಿ ಕಾರ್ಯಕ್ರಮದಲ್ಲಿ ಮೋದಿಜಿ ಅವರಿಗೆ ಶುಭಕೋರುವ ಮೂಲಕ ಸಿಹಿ ಹಂಚಿ ರಾಮದಾಸ್ ಪಾರ್ಕ್ ಹಾಗೂ ಸುಮಾರು 5 ಪಾರ್ಕ್ ಗಳಲ್ಲಿ ಅರಳಿಮರ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಜೊತೆಗೆ ಪೌರಕಾರ್ಮಿಕ ಜಯಂತಿ ಅಂಗವಾಗಿ ಇದೆ ವಾರ್ಡಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಸನ್ಮಾನಿಸಿ ಸಿಹಿ ನೀಡುವ ಮೂಲಕ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಡಾ. ಭಾನುಪ್ರಕಾಶ್, ಬಿಜೆಪಿ ಮುಖಂಡರಾದ ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ, ಮಾಜಿ ಕರ್ನಾಟಕ ವಸ್ತು ಪ್ರಾಧಿಕಾರದ ಅಧ್ಯಕ್ಷರಾದ ಬಿಪಿ ಮಂಜುನಾಥ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಎಚ್ ಜಿ ಗಿರಿಧರ್, ವಾರ್ಡಿನ ನಗರಪಾಲಿಕೆ ಸದಸ್ಯರಾದ ಉಷಾ ನಾರಾಯಣಪ್ಪ, ನಗರ ಪಾಲಿಕೆ ನಾಮನಿರ್ದೇಶಕ ಸದಸ್ಯರಾದ ಆಶಾ ನಾಗ್ಭೂಷಣ್ ಸಿಂಗ್, ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಸ್ವಾಮಿ ಗೌಡ ಮತ್ತು ವೇಲು ಕ್ಷೇತ್ರ ಒಬಿಸಿ ಪ್ರಧಾನ ಕಾರ್ಯದರ್ಶಿಗಳಾದ ಅಂಬರೀಶ ಮತ್ತು ವಿಜಯ್ ಹಾಗೂ ಉಪಾಧ್ಯಕ್ಷರು ಕಾರ್ಯದರ್ಶಿಗಳು ಕಾರ್ಯಕಾರಿ ಸದಸ್ಯರು ನಗರ ಓಬಿಸಿ ಪ್ರಧಾನ ಕಾರ್ಯದರ್ಶಿ ಮಣಿರತ್ನಂ ಮತ್ತು ಮಹದೇವ್ ಕೃಷ್ಣಮೂರ್ತಿರಾವ್ ಪ್ರಸಾದ್ ಬ್ರಹ್ಮಚಾರ್ ಜೀವನ್ ಸಹ ಸಂಚಾಲಕರು ಕೆ ಎನ್ ಸ್ವಾಮಿ ಕ್ಷೇತ್ರದ ಪದಾಧಿಕಾರಿಗಳು ಕ್ಷೇತ್ರದ ವಿವಿಧ ಮೋರ್ಚಾದ ಅಧ್ಯಕ್ಷರು ಪದಾಧಿಕಾರಿಗಳು ವಾರ್ಡ್ ಅಧ್ಯಕ್ಷರುಗಳು ನಗರ ಪದಾಧಿಕಾರಿಗಳು ನಗರ ಕಾರ್ಯಕಾರಿ ಸದಸ್ಯರು ಈ ವಾರ್ಡಿನ ಯಜಮಾನರು ಹಿರಿಯ ಮುಖಂಡರು ಎಲ್ಲಾ ಕಾರ್ಯಕರ್ತ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು