Mysore
28
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ಪ.ಮಲ್ಲೇಶ್ ವಿರುದ್ಧ ಬ್ರಾಹ್ಮಣ ಸಂಘಟನೆಗಳ ದೂರು

ಮೈಸೂರು: ಬ್ರಾಹ್ಮಣರ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿರುವ ವಿಚಾರವಾದಿ ಪ.ಮಲ್ಲೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಬ್ರಾಹ್ಮಣ ಸಂಘಟನೆಗಳ ಒಕ್ಕೂಟದಿಂದ ಗುರುವಾರ ದೂರು ದಾಖಲಿಸಲಾಗಿದೆ.
ಈ ವೇಳೆ ಮಾತನಾಡಿದ ನಗರಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್, ಮಲ್ಲೇಶ್ ಅವರಿಗೆ ವಯೋ ಸಹಜ ಅರಳು ಮರುಳು ಎನ್ನುವಂತಾಗಿದೆ. ಅತೀ ಬುದ್ದಿವಂತರಂತೆ ವರ್ತಿಸುವ ಅವರು ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ನಂತರ ಬಾಯ್ತಪ್ಪಿನಿಂದ ಹೇಳಿದೆ ಎನ್ನುತ್ತಾರೆ. ಇಂತಹ ನಾಟಕವನ್ನು ಬಿಡಬೇಕು ಎಂದರು.
ಅವರು ವಿಚಾರವಾದಿ ಎಂದು ಹೇಳಿಕೊಂಡು ಸಮುದಾಯಗಳನ್ನು ಟೀಕಿಸುವುದು ಸರಿಯಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದೆ ಈ ರೀತಿಯಾಗಿ ಮಾತನಾಡಿ ಅವರ ಮರ್ಯಾದೆಯನ್ನೂ ಹಾಳು ಮಾಡಿದ್ದೀರಿ ಎಂದರು.
ಧಾರ್ಮಿಕ ಮುಖಂಡರಾದ ಡಾ. ಭಾನುಪ್ರಕಾಶ್ ಶರ್ಮ, ಬಿಜೆಪಿ ನಗರಾಧ್ಯಕ್ಷರಾದ ಟಿ.ಎಸ್.ಶ್ರೀವತ್ಸ, ವಿಪ್ರ ಮುಖಂಡರಾದ ಎಚ್.ವಿ.ರಾಜೀವ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಆದರ್ಶ ಸಂಘದ ಅಧ್ಯಕ್ಷ ಜಿ.ಆರ್.ನಾಗರಾಜ್, ವಿಪ್ರ ಪ್ರೊಫೆಷನಲ್ ಫೋರಂ ಅಧ್ಯಕ್ಷ ಎಸ್.ಭಾಷ್ಯಂ, ಸುಧೀಂದ್ರ, ಕೆ.ಆರ್.ಸತ್ಯನಾರಾಯಣ್, ರಾಕೇಶ್ ಭಟ್, ಎಚ್.ಜಿ.ಗಿರಿಧರ್ ಜಯಸಿಂಹ, ಶ್ರೀನಿವಾಸ್ ಪ್ರಸಾದ್, ಕಾಂಗ್ರೆಸ್ ಮುಖಂಡರಾದ ಲತಾ ಮೋಹನ್, ಜೆಡಿಎಸ್ ಯುವ ಮುಖಂಡರಾದ ವಿಜಯಕುಮಾರ್, ನಾಗೇಂದ್ರ ಬಾಬು, ಯೋಗ ನರಸಿಂಹ ಮುರಳಿ, ಹೊಯ್ಸಳ ಕರ್ನಾಟಕದ ರಂಗನಾಥ್, ವಕೀಲರಾದ ಶೇಷಗಿರಿ, ವಿಪ್ರ ಮಹಿಳಾ ಸಂಘದ ಅಧ್ಯಕ್ಷರಾದ ಡಾಕ್ಟರ್ ಲಕ್ಷ್ಮೀದೇವಿ, ಮಾಜಿ ನಗರಪಾಲಿಕೆ ಸದಸ್ಯರಾದ ಸೌಭಾಗ್ಯ ಮೂರ್ತಿ, ಕಡಕೋಳ ಜಗದೀಶ್, ವಿವೇಕಾನಂದ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಜಯರಾಮ್, ಓಂ ಶ್ರೀನಿವಾಸ ಇನ್ನಿತರ ವಿಪ್ರ ಮುಖಂಡರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!