Mysore
20
overcast clouds
Light
Dark

ಪ.ಮಲ್ಲೇಶ್ ಉದ್ಧೇಶಪೂರ್ವಕವಾಗಿ ಬ್ರಾಹ್ಮಣ ಸಮುದಾಯದ ಬಗ್ಗೆ ಹೇಳಿಕೆ ನೀಡಿಲ್ಲ: ಶಾಂತರಾಜು

ಮೈಸೂರು: ಹಿರಿಯ ಸಮಾಜವಾದಿ ಪ.ಮಲ್ಲೇಶ್ ಅವರು ಉದ್ಧೇಶ ಪೂರ್ವಕವಾಗಿ ಬ್ರಾಹ್ಮಣ ಸಮುದಾಯದ ಬಗ್ಗೆ ಹೇಳಿಕೆ ನೀಡಿಲ್ಲ. ಹಾಗಾಗಿ ಬ್ರಾಹ್ಮಣ ಸಮುದಾಯ ಪ್ರತಿಭಟನೆಯನ್ನು ಮುಂದುವರಿಸದೆ ಇರುವುದು ಸೂಕ್ತ ಎಂದು ಶಾಂತರಾಜು, ಅಧ್ಯಕ್ಷ ದಲಿತ ವೆಲ್ ಫೇರ್ ಟ್ರಸ್ಟ್ ಅಭಿಪ್ರಾಯಪಟ್ಟಿದೆ.

ಈ ಕುರಿತು ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಟ್ರಸ್ಟ್ ಅಧ್ಯಕ್ಷ ಶಾಂತರಾಜು ಮಾತನಾಡಿ, ಪ.ಮಲ್ಲೇಶ್ ಹೇಳಿಕೆ ಸಂಬಂಧ ವಿಷಾದ ವ್ಯಕ್ತ ಪಡಿಸಿದ ಮೇಲೂ ಹೋರಾಟ ಸೂಕ್ತವಲ್ಲ. ಪ.ಮಲ್ಲೇಶ್ ಅವರು ಬಸವಣ್ಣ ಅವರ ಅನುಯಾಯಿ, ಬಸವಣ್ಣ ಹೇಳಿದ್ದನ್ನು ಪಾಲಿಸುತ್ತಿದ್ದಾರೆ. ಜೊತೆಗೆ ಬದ್ಧತೆಯಿಂದ ಹೋರಾಟ ಮಾಡುತ್ತಿರುವವರಾಗಿದ್ದಾರೆ. ನಾವು ಬ್ರಾಹ್ಮಣ ಸಮುದಾಯದ ವಿರೋಧಿಗಳಲ್ಲ, ಬ್ರಾಹ್ಮಣ್ಯದ ವಿರೋಧಿಗಳು. ಬ್ರಾಹ್ಮಣ ಸಮುದಾಯದಲ್ಲಿ ಸಮಾಜ ಸುಧಾರಕರು ಇದ್ದು, ಅಂತವರ ಬಗ್ಗೆ ನಮಗೆ ಗೌರವವಿದೆ ಎಂದರು.

ಕಳೆದ ಎಂಟು ವರ್ಷಗಳಿಂದ ದೇಶದ ದಲಿತರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ ಜಾತಿ ಜಾತಿಗಳ ನಡುವೆ ವೈಷಮ್ಯ ಬಿತ್ತಲಾಗುತ್ತಿದೆ. ಇದರ ಬಗ್ಗೆ ಯಾಕೇ ಹೋರಾಟ ನಡೆಯುತ್ತಿಲ್ಲ. ಪ.ಮಲ್ಲೇಶ್ ವಿರುದ್ಧ ಪ್ರತಿಭಟಿಸಿದವರು ಅಸ್ಪೃಶ್ಯತೆ ಆಚರಣೆ ವಿರುದ್ಧ ಮಾತನಾಡಿದ್ದಾರೆ ಎಂದು ಕೇಳಿದರು

ಮೂಡಿಗೇರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಕ್ಷೇತ್ರದ ಜನರು ಹೊಡೆದರು ಕೂಡ ಇಲ್ಲಿಯವರೆಗೂ ಬಿಜೆಪಿಯ ಜನಪ್ರತಿನಿಧಿಗಳು ಮಾತಾಡಿಲ್ಲ. ಮೀಸಲು ಕ್ಷೇತ್ರದಿಂದ ಆಯ್ಕೆಯಾದ ಶಾಸಕರು ತುಟಿ ಬಿಚ್ಚಿಲ್ಲ. ಆ ಘಟನೆಗೆ ಸಚಿವ ಸಿ.ಟಿ.ರವಿ ನೇರ ಕಾರಣ. ರಾಜ್ಯದಲ್ಲಿ ಶಾಸಕರೊಬ್ಬರನ್ನು ಅಟ್ಟಿಸಿಕೊಂಡು ಹೋಗಿ ಹೊಡೆಯುತ್ತಾರೆಂದರೆ, ಇಲ್ಲಿ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಕೆಲಸ ನಡೆಯುತ್ತಿದೆ ಎಂದರ್ಥ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರಪಾಲಿಕೆ ಮಾಜಿ ಸದಸ್ಯ ಸಿದ್ದಪ್ಪ, ಮುಖಂಡ ಮಹಾಲಿಂಗು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಡಿ.೬ರಂದು ಬೆಂಗಳೂರಿನಲ್ಲಿ ದಲಿತ ಸಂಘಟನೆಗಳ ಸ್ವಾಭಿಮಾನಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮೈಸೂರು, ಚಾಮರಾಜನಗರ ಜಿಲ್ಲೆಗಳು ಸೇರಿದಂತೆ ಲಕ್ಷಕ್ಕೂ ಹೆಚ್ಚು ಜನ ದಲಿತ ಮುಖಂಡರು ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಲಿದ್ದಾರೆ. – ಶಾಂತರಾಜು, ಅಧ್ಯಕ್ಷ, ದಲಿತ ವೇಲ್ ಫೇರ್ ಟ್ರಸ್ಟ್.

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ