Mysore
20
overcast clouds
Light
Dark

ಏಕಮುಖ ಸಂಚಾರ, ವಾಹನ ನಿಲುಗಡೆ ನಿರ್ಬಂಧ ಮಾರ್ಗಸೂಚಿ

ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ಹೃದಯಭಾಗದ ರಸ್ತೆಗಳ ಸಂಚಾರಕ್ಕೆ ಪೊಲೀಸ್ ಇಲಾಖೆ ನಿರ್ಬಂಧ

ಮೈಸೂರು: ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ಹೃದಯಭಾಗದ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಏಕಮುಖ ಸಂಚಾರ, ವಾಹನ ನಿಲುಗಡೆ ಸಂಬಂಧ ಪೊಲೀಸ್ ಇಲಾಖೆಯು ಮಾರ್ಗಸೂಚಿಯನ್ನು ಹೊರಡಿಸಿದೆ.

ಏಕಮುಖ ವಾಹನ ಸಂಚಾರ-ಸೆ.೨೬ರಿಂದ ಅ.೫ರವರೆಗೆ ಪ್ರತಿದಿನ ಮಧ್ಯಾಹ್ನ ೩ರಿಂದ ರಾತ್ರಿ ೯.೩೦ರಯವರೆಗೆ

* ಅರಮನೆಯ ಸುತ್ತಲಿನ ರಸ್ತೆಗಳು(ಅ.೫ರಂದು ದಸರಾ ಮೆರವಣಿಗೆಯು ಪ್ರಾರಂಭವಾಗಿ ಆಯುರ್ವೇದಿಕ್ ವೃತ್ತ ದಾಟುವವರೆಗಿನ ಸಮಯವನ್ನು ಹೊರತುಪಡಿಸಿ) ಜೆಎಸ್‌ಎಸ್ ವೃತ್ತ-ಕುಸ್ತಿ ಅಖಾಡ ಜಂಕ್ಷನ್-ಬಿ.ಎನ್.ರಸ್ತೆ-ಹಾರ್ಡಿಂಜ್ ವೃತ್ತ-ಹಳೆ ಪ್ರತಿಮೆ
ವೃತ್ತ-ಎ.ವಿ.ರಸ್ತೆ-ಕೆ.ಆರ್.ವೃತ್ತ-ನ್ಯೂ ಸಯ್ಯಾಜಿರಾವ್ ರಸ್ತೆ-ಪಾಠಶಾಲಾ ವೃತ್ತ-ಚಾಮರಾಜ ರಸ್ತೆ-ಜೆಎಸ್‌ಎಸ್ ವೃತ್ತ. ಈ ರಸ್ತೆಗಳಲ್ಲಿ ಅರಮನೆಯನ್ನು ಮಧ್ಯೆಬಿಂದುವನ್ನಾಗಿ ಪರಿಗಣಿಸಿ ಆ್ಯಂಟಿ ಕ್ಲಾಕ್ ವೈಸ್ ಮಾದರಿಯಲ್ಲಿ ವಾಹನಗಳು ಸಂಚರಿಸಬೇಕು.(ಪಾಠಶಾಲಾ ವೃತ್ತದಿಂದ ಪೂರ್ವಕ್ಕೆ ಜೆಎಸ್‌ಎಸ್ ವೃತ್ತ ವರೆಗಿನ ರಸ್ತೆ ಹೊರತುಪಡಿಸಿ)

* ನ್ಯೂ ಸಯ್ಯಾಜಿರಾವ್ ರಸ್ತೆ, ಕೆ.ಆರ್.ವೃತ್ತ-ಆಯುರ್ವೇದಿಕ್ ವೃತ್ತ-ಪೂರ್ವಕ್ಕೆ ಇರ್ವಿನ್ ರಸ್ತೆ-ನೆಹರು ವೃತ್ತ-ಅಶೋಕ ರಸ್ತೆ-ಮಹಾವೀರ ವೃತ್ತ-ಹಳೆ ಪ್ರತಿಮೆ ವೃತ್ತ. ಈ ರಸ್ತೆಗಳ ಮಧ್ಯೆ ಇರುವ ಪ್ರದೇಶವನ್ನು ಮಧ್ಯೆ ಬಿಂದುವನ್ನಾಗಿ ಕ್ಲಾಕ್ ವೈಸ್ ಮಾದರಿಯಲ್ಲಿ ವಾಹನಗಳು ಸಂಚರಿಸಬೇಕು.

* ನೆಹರು ವೃತ್ತದಿಂದ ಬಿ.ಎನ್.ರಸ್ತೆ ಜಂಕ್ಷನ್‌ವರೆಗೆ ಪಶ್ಚಿಮದಿಂದ ಪೂರ್ವಕ್ಕೆ ಏಕಮುಖ ಸಂಚಾರ.
* ಬನುಮಯ್ಯ ರಸ್ತೆಯಲ್ಲಿ ಚಾಮರಾಜ ಜೋಡಿ ರಸ್ತೆ ಜಂಕ್ಷನ್‌ನಿಂದ ಬನುಮಯ್ಯ ಚೌಕದವರೆಗೆ ದಕ್ಷಿಣದಿಂದ ಉತ್ತರಕ್ಕೆ ಏಕಮುಖ ಸಂಚಾರ.
* ತ್ಯಾಗರಾಜ ರಸ್ತೆಯಲ್ಲಿ ಎನ್.ಮಾಧುರಾವ್ ವೃತ್ತದಿಂದ ಚಾಮರಾಜ ಜೋಡಿ ರಸ್ತೆ ಜಂಕ್ಷನ್‌ವರೆಗೆ ದಕ್ಷಿಣದಿಂದ ಉತ್ತರಕ್ಕೆ ಏಕಮುಖ ಸಂಚಾರ.


ವಾಹನಗಳ ನಿಲುಗಡೆ ನಿಷೇಧ-ಸೆ.೨೬ರಿಂದ ಅ.೫ರವರೆಗೆ ಪ್ರತಿದಿನ ಮಧ್ಯಾಹ್ನ ೩ರಿಂದ ರಾತ್ರಿ ೯.೩೦ರವರೆಗೆ
* ಎಸ್.ಆರ್.ರಸ್ತೆ: ಕೆ.ಆರ್.ವೃತ್ತದಿಂದ ಬಸವೇಶ್ವರ ವೃತ್ತದವರೆಗೆ

* ಪುರಂದರ ರಸ್ತೆ: ನಗರಪಾಲಿಕೆ ವೃತ್ತದಿಂದ ಬಿ.ಎನ್.ರಸ್ತೆ ಜಂಕ್ಷನ್ ವರೆಗೆ

* ಬಿ.ಎನ್.ರಸ್ತೆ: ಜೆಎಸ್‌ಎಸ್ ವೃತ್ತದಿಂದ ಹಾರ್ಡಿಂಜ್ ವೃತ್ತದವರೆಗೆ

* ಎ.ವಿ.ರಸ್ತೆ: ಹಾರ್ಡಿಂಜ್ ವೃತ್ತದಿಂದ ಕೆ.ಆರ್.ವೃತ್ತದವರೆಗೆ

* ಅಶೋಕ ರಸ್ತೆ: ನೆಹರು ವೃತ್ತದಿಂದ ಮಹಾವೀರ ವೃತ್ತದವರೆಗೆ
* ಅಶೋಕ ರಸ್ತೆ: ಮಹಾವೀರ ವೃತ್ತದಿಂದ ಜಯಚಾಮರಾಜ ವೃತ್ತದವರೆಗೆ(ಬಲರಾಮ ದ್ವಾರದ ಮುಂಭಾಗ ಇರುವ ಖಾಲಿಸ್ಥಳ ಸೇರಿದಂತೆ)
* ಫೌಂಟೇನ್ ವೃತ್ತದಿಂದ ಮಿಲೇನಿಯಂ ವೃತ್ತದವರೆಗೆ
* ವಸ್ತು ಪ್ರರ್ದಶನದ ಮುಂಭಾಗದ ಟ್ಯಾಂಕ್ ಬಂಡ್ ರಸ್ತೆ: ಬಿ.ಎನ್.ರಸ್ತೆ ಜಂಕ್ಷನ್‌ನಿಂದ ಶಾಲಿವಾಹನ(ಮೃಗಾಲಯದ ರಸ್ತೆ) ರಸ್ತೆ ಜಂಕ್ಷನ್‌ವರೆಗೆ.
* ಇಟ್ಟಿಗೆಗೂಡಿನ ಹೊಸ ಬೀದಿ ೫ನೇ ತಿರುವು: ಶಾಲಿವಾಹನ(ಮೃಗಾಲಯದ ರಸ್ತೆ) ರಸ್ತೆ ಜಂಕ್ಷನ್‌ನಿಂದ ವಸ್ತು ಪ್ರರ್ದಶನದ ಪೂರ್ವ ದ್ವಾರದವರೆಗೆ.
* ಮಾನಸ ರಸ್ತೆ: ವಾಣಿಲಾಸ ರಸ್ತೆ ಜಂಕ್ಷನ್‌ನಿಂದ ಲೋಕರಂಜನ್‌ರಸ್ತೆ ಜಂಕ್ಷನ್‌ವರೆಗೆ
* ಮಲೈಮಹದೇಶ್ವರ ರಸ್ತೆ: ಬಿ.ಎನ್.ರಸ್ತೆ ಜಂಕ್ಷನ್‌ನಿಂದ(ಛತ್ರಿಮರ) ಪೂರ್ವಕ್ಕೆ ಚನ್ನಯ್ಯ ವೃತ್ತದವರೆಗೆ
* ಸರ್ಕಾರಿ ಭವನದ ರಸ್ತೆ: ಸರ್ಕಾರಿ ಭವನದ ದಕ್ಷಿಣ ದ್ವಾರದ ಜಂಕ್ಷನ್‌ನಿಂದ ದಕ್ಷಿಣಕ್ಕೆ ಹಾರ್ಡಿಂಜ್ ವೃತ್ತದವರೆಗೆ.

 

ವಾಹನ ನಿಲುಗಡೆ: ದಸರಾ ಮಹೋತ್ಸವ ವೇಳೆ ೧೦ ದಿನಗಳು

* ಚಾಮುಂಡಿಬೆಟ್ಟ: ೧ರಿಂದ ೩ನೇ ಪಾರ್ಕಿಂಗ್ ಸ್ಥಳ, ಬಹು ಮಹಡಿ ಪಾರ್ಕಿಂಗ್, ದೇವಿಕೆರೆ ಮೈದಾನ.

* ಅಂಬಾವಿಲಾಸ ಅರಮನೆ: ಕರಿಕಲ್ ತೊಟ್ಟಿ ದ್ವಾರ, ವರಹಾದ್ವಾರ ಹಾಗೂ ಅಂಬಾ ವಿಲಾಸ ದ್ವಾರದ ಹೊರ ಆವರಣ, ಕಾಡಾ ಕಚೇರಿ ಆವರಣ, ಜಯಮಾರ್ತಾಂಡ ದ್ವಾರದ ಎದುರಿನಲ್ಲಿರುವ ಫುಟ್‌ಬಾಲ್ ಮೈದಾನ, ಪುರಭವನದ ಆವರಣ.
* ಕುಪ್ಪಣ್ಣ ಪಾರ್ಕಿನ ಫಲಪುಷ್ಪ ಪ್ರದರ್ಶನ: ಅರಸು ಬೋರ್ಡಿಂಗ್ ಶಾಲೆ, ಪೊಲೀಸ್ ಆಯುಕ್ತರ ಕಚೇರಿ, ವಸಂತ್ ಮಹಲ್, ಪೀಪಲ್ಸ್ ಪಾರ್ಕ್ ಆವರಣ.
* ದಸರಾ ವಸ್ತು ಪ್ರದರ್ಶನ: ವಸ್ತು ಪ್ರದರ್ಶನದ ಪೂರ್ವ ದ್ವಾರದ ಒಳ ಆವರಣ(ಇಟ್ಟಿಗೆಗೂಡು), ವಸ್ತು ಪ್ರದರ್ಶನದ ದಕ್ಷಿಣ ದ್ವಾರದ ಒಳ ಆವರಣ(ಎಂ.ಜಿ.ರಸ್ತೆ), ಫುಟ್‌ಬಾಲ್ ಮೈದಾನ.
* ಕುಸ್ತಿ ಪಂದ್ಯಾವಳಿ: ವಸ್ತು ಪ್ರದರ್ಶನದ ಪೂರ್ವ ದ್ವಾರದ ಒಳ ಆವರಣ(ಇಟ್ಟಿಗೆಗೂಡು), ಫುಟ್‌ಬಾಲ್ ಮೈದಾನ.
* ಆಹಾರ ಮೇಳ ನಡೆಯುವ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ: ಜೂನಿಯರ್ ಮಹಾರಾಜ ಕಾಲೇಜು ಆವರಣ, ಡಿಸಿ ಕಚೇರಿಯ ಉತ್ತರ ಭಾಗ, ಮಹಾರಾಣಿ ಕಾಲೇಜು ಆವರಣ, ಬ್ಯಾಸ್ಕೆಟ್ ಬಾಲ್ ಮೈದಾನ(ರಾಧಕೃಷ್ಣ ಮಾರ್ಗ).
* ಆಹಾರ ಮೇಳ ನಡೆಯುವ ಲಲಿತ್ ಮಹಲ್ ಪಕ್ಕದ ಮುಡಾ ಮೈದಾನ: ಲಲಿತ್ ಮಹಲ್ ಮೈದಾನ, ಲಲಿತ್ ಮಹಲ್ ಸರ್ವಿಸ್ ರಸ್ತೆ.
* ಯುವ ದಸರಾ ನಡೆಯುವ ಮಹಾರಾಜ ಕಾಲೇಜು ಮೈದಾನ: ಮಹಾರಾಜ ಕಾಲೇಜು ಶತಮಾನೋತ್ಸವ ಭವನದ ಆವರಣ, ಯುವರಾಜ ಕಾಲೇಜು ಮೈದಾನದ ಆವರಣ, ಜಯಚಾಮರಾಜೇಂದ್ರ ಅರಸು ಬೋರ್ಡಿಂಗ್ ಶಾಲೆ ಮೈದಾನ, ಕೆಆರ್‌ಬಿ ರಸ್ತೆಯಲ್ಲಿ ಏಕಲವ್ಯ ವೃತ್ತದಿಂದ ವಾಣಿ ವಿಲಾಸ ರಸ್ತೆ ಜಂಕ್ಷನ್‌ವರೆಗೆ.
* ಮೃಗಾಲಯ: ಮೃಗಾಲಯದ ಎದುರಿನಲ್ಲಿರುವ ವಾಹನ ನಿಲುಗಡೆ ಸ್ಥಳ, ವಸ್ತು ಪ್ರದರ್ಶನದ ಪೂರ್ವ ದ್ವಾರದ ಒಳ ಆವರಣ (ಇಟ್ಟಿಗೆಗೂಡು), ವಸ್ತು ಪ್ರದರ್ಶನದ ದಕ್ಷಿಣ ದ್ವಾರದ ಒಳ ಆವರಣ(ಎಂ.ಜಿ.ರಸ್ತೆ), ಫುಟ್‌ಬಾಲ್ ಮೈದಾನ.
* ದಸರಾ ಕ್ರೀಡೆ ನಡೆಯುವ ಚಾಮುಂಡಿ ವಿಹಾರ ಕ್ರೀಡಾಂಗಣ: ಚಾಮುಂಡಿ ವಿಹಾರ ಕ್ರೀಡಾಂಗಣದ ಪಶ್ಚಿಮ ಭಾಗದ ಪಾರ್ಕಿಂಗ್, ದಕ್ಷಿಣ ಭಾಗದ ಬ್ಯಾಸ್ಕೆಟ್ ಬಾಲ್ ಕೋರ್ಟ್ ಬಳಿ.
* ದಸರಾ ಚಲನಚಿತ್ರೋತ್ಸವ ನಡೆಯುವ ಕಲಾಮಂದಿರ: ಕಲಾಮಂದಿರದ ಒಳ ಆವರಣದ ಪೂರ್ವ ಭಾಗದ ಆವರಣ.
* ಮಹಿಳಾ ಮತ್ತು ಮಕ್ಕಳ ದಸರಾ ನಡೆಯುವ ಜಗನ್ಮೋಹನ ಅರಮನೆ: ಜಗನ್ಮೋಹನ ಅರಮನೆ ಆವರಣದ ದಕ್ಷಿಣ ಭಾಗ, ಉತ್ತರ ಭಾಗ.
* ರೈತ ದಸರಾ ನಡೆಯುವ ಜೆ.ಕೆ.ಮೈದಾನ: ಜೆ.ಕೆ.ಮೈದಾನದ ಆವರಣ.


ಸಾರ್ವಜನಿಕರು ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ವಾಹನ ನಿಲುಗಡೆ ಮಾಡಬೇಕು. ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿ ಪರ್ಯಾಯ ಮಾರ್ಗ ಸೂಚಿಸಲಾಗಿದೆ. ಸಾರ್ವಜನಿಕರು ವಾಹನಗಳನ್ನು ದೂರದಲ್ಲಿ ನಿಲ್ಲಿಸಿ ಅರಮನೆ ಸುತ್ತಮುತ್ತ ಕಾಲ್ನಡಿಗೆಯಲ್ಲಿ ಸಂಚರಿಸಿದರೆ ಉತ್ತಮ.
ಡಾ.ಚಂದ್ರಗುಪ್ತ, ನಗರ ಪೊಲೀಸ್ ಆಯುಕ್ತ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ