Mysore
18
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಮಲೆಯಾಳ ಸವಾಜದಿಂದ ವೈವಿಧ್ಯಮಯ ಓಣಂ ಆಚರಣೆ

ಚಾಮರಾಜನಗರ: ನಗರದ ಸಂತ ಪೌಲರ ಸಮುದಾಯ ಭವನದಲ್ಲಿ ವೈವಿದ್ಯಮಯ ಓಣಂ ಹಬ್ಬವನ್ನು ಆಚರಿಸಲಾಯಿತು.

ಜಿಲ್ಲಾ ಮಲೆಯಾಳ ಸವಾಜದಿಂದ ನಡೆದ ಕಾರ್ಯಕ್ರಮದಲ್ಲಿ ಹೂವಿನ ರಂಗೋಲಿ ಸಿಂಗಾರಿಮೇಳ ಓಣಂನ ಪ್ರಮುಖ ಆಕರ್ಷಣೆಯಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಸವಾಜದ ಅಧ್ಯಕ್ಷ ರಾಜು ವರ್ಗೀಸ್ ಮಾತನಾಡಿ, ನಾವು ಮೂಲತಃ ಕೇರಳದವರಾದರೂ ಈಗ ಜಿಲ್ಲೆಯಲ್ಲಿ ನೆಲೆಸಿದ್ದೇವೆ. ಕನ್ನಡ ಭಾಷೆ ಕಲಿಯಬೇಕು. ಕನ್ನಡ ಸಂಸ್ಕೃತಿ ಅಳವಡಿಸಿಕೊಳ್ಳಬೇಕು. ಕನ್ನಡಿಗರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

೨೦೦೮ರಲ್ಲಿ ಜಿಲ್ಲಾ ಮಲೆಯಾಳ ಸಮಾಜ ಸ್ಥಾಪನೆಯಾಯಿತು. ಆದರೆ ೨೦೧೮ ರಲ್ಲಿ ನೋಂದಣಿಯಾಯಿತು. ಅಲ್ಲಿಂದ ಓಣಂ ಆಚರಿಸಿಕೊಂಡು ಬರುತ್ತಿದ್ದೇವೆ. ಇದರ ಜೊತೆಗೆ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದೇವೆ. ಶವಸಾಗಾಣಿಕೆ ವಾಹನವನ್ನು ಎಲ್ಲ ವರ್ಗದ ಬಡವರಿಗೆ ಉಚಿತವಾಗಿ ಒದಗಿಸುತ್ತಿದ್ದೇವೆ ಎಂದು ತಿಳಿಸಿದರು.

ಮೂಡಲಧ್ವನಿ ವೃದ್ಧಾಶ್ರಮದ ಶಂಕರ್ ಹಾಗೂ ಗೋಪಕುಮಾರ್, ಸ್ವಾಮಿನಾಥನ್, ಸ್ವಾಮಿನಾಥ ಅಯ್ಯರ್, ಸುಬ್ರಹ್ಮಣ್ಯ, ವೇಣುಗೋಪಾಲ್ ರಾಜಮ್ಮ, ಗಂಗಾಧರನ್, ಶಾಂತಮ್ಮ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಸವಾಜದ ಕಾರ್ಯದರ್ಶಿ ಸೆಬಾಸ್ಟಿಯನ್ ಜೋಕಿಂ, ಸಿ.ಆರ್.ಹರೀಶ್, ಮೊಹಮ್ಮದ್ ಆಲಿ, ಸುಧಾ, ರವಿ ಮೊದಲಾದವರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!