ಮೈಸೂರು : ಮೂರು ಸಾವಿನ ಬಳಿಕ ಎಚ್ಚೆತ್ತ ಅಧಿಕಾರಿಗಳು ಇದೀಗ ಯಮಸ್ವರೂಪಿಯಾಗಿದ್ದ ಹಂಪ್‌ಗಳನ್ನು ತೆರವುಗೊಳಿಸಿದ್ದಾರೆ.
ವಿಶ್ವವಿದ್ಯಾನಿಲಯದ ಕುವೆಂಪು ಪ್ರತಿಮೆ ಮುಂದೆ ರಾತ್ರೋರಾತ್ರಿ ಅವೈಜ್ಞಾನಿಕವಾಗಿ ರಸ್ತೆ ಹಂಪ್ ನಿರ್ಮಿಸಿ ಅದಕ್ಕೆ ಮಾರ್ಕ್ ಮಾಡದ ಪರಿಣಾಮ 20 ಅಪಘಾತಗಳಾಗಿದ್ದು, ಮೂವರು ಸವಾರರು ಮೃತಪಟ್ಟಿದ್ದರು.
ಈ ರಸ್ತೆಯಲ್ಲಿ ಸಂಚರಿಸುವ ಸವಾರರು ಹೊಸದಾಗಿ ಹಂಪ್ಸ್ ಹಾಕಿರುವುದನ್ನು ಗಮನಿಸದೆ ವೇಗವಾಗಿ ವಾಹನ ಚಾಲನೆ ಮಾಡಿದ್ದಾರೆ. ಇದರಿಂದ ವಾಹನಗಳು ನಿಯಂತ್ರಣ ತಪ್ಪಿ ಅಪಘಾತಕ್ಕೆ ಒಳಗಾಗಿವೆ.
ಕಳೆದ ಎರಡು ದಿನದಲ್ಲಿ 20ಕ್ಕೂ ಹೆಚ್ಚು ಅಪಘಾತ ಈ ಹಂಪ್‌ನಿಂದ ಆಗಿದ್ದು, ಮೂರು ಸವಾರರು ಮೃತಪಟ್ಟಿದ್ದಾರೆ. ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪೊಲೀಸರ ಗಮನಕ್ಕೆ ತಾರದೆ ಅವೈಜ್ಞಾನಿಕವಾಗಿ ಹಂಪ್ ನಿರ್ಮಿಸಿದ ಪಾಲಿಕೆ ಎಂಜಿನಿಯರ್ ಸೇರಿದಂತೆ ಗುತ್ತಿಗೆದಾರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಮೂರು ಸಾವಿನ ಬಳಿಕ ಎಚ್ಚೆತ್ತ ಅಧಿಕಾರಿಗಳು ರಸ್ತೆಯಲ್ಲಿ ನಿರ್ಮಿಸಿದ್ದ ಹಂಪ್‌ಗಳನ್ನು ತೆರವುಗೊಳಿಸಿದ್ದಾರೆ.