Mysore
15
overcast clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ನ.26ರಂದು “ಭಾರತದ ಪ್ರಜೆಗಳ ಹೊಣೆ: ಸಂವಿಧಾನ ರಕ್ಷಣೆ” ಕುರಿತು ವಿಚಾರ ಸಂಕಿರಣ

ಮೈಸೂರು: ನಗರದ ವಿವಿಧ ಸಂಘಟನೆಗಳ ಒಕ್ಕೂಟದ ವತಿಯಿಂದ ನ.೨೬ರಂದು ಸಂವಿಧಾನ: ಬಹುತ್ವ ಸಂಸ್ಕೃತಿಯ ತ್ತ ಸಾಗೋಣ ಬನ್ನಿ ಶೀರ್ಷಿಕೆಯಡಿ ‘ಭಾರತದ ಪ್ರಜೆಗಳ ಹೊಣೆ: ಸಂವಿಧಾನ ರಕ್ಷ ಣೆ’ ವಿಷಯ ಕುರಿತ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಂಗಾಯಣ ಮಾಜಿ ನಿರ್ದೇಶಕರೂ ಆದ ರಂಗಕರ್ಮಿ ಎಚ್.ಜನಾರ್ಧನ (ಜನ್ನಿ) ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ ೪.೩೦ಕ್ಕೆ ಕಲಾಮಂದಿರದ ಕಿರು ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾಟಕಕಾರ ಡಾ.ರಾಜಪ್ಪ ದಳವಾಯಿ ಅವರು ವಿಷಯ ಮಂಡಿಸಲಿದ್ದಾರೆ. ಪತ್ರಕರ್ತರಾದ ಟಿ.ಗುರುರಾಜ್, ಜಗದೀಶ್ ಕೊಪ್ಪ, ಮೆಸ್ಕೋ ಸಂಸ್ಥೆಯ ಪ್ರಾಂಶುಪಾಲ ಮಹಮ್ಮದ್ ಕಲೀಮ್, ಕವಿ ಅಜೀಜ್ ಅವರು ಪ್ರತಿಕ್ರಿಯೆ ನೀಡುವರು. ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಅವರು ಅಧ್ಯಕ್ಷ ತೆ ವಹಿಸುವರು ಎಂದರು. ಹಾಗೆಂ ಮೈಸೂರಿನ ಫೆಡರೇಷನ್ ಆಫ್ ಮುಸ್ಲಿಂ ಒಕ್ಕೂಟದ ಸಂಯೋಜನೆಯಲ್ಲಿ
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನ ಚರಿತ್ರೆಯ ಮಹತ್ವ ಸಾರುವ ಭಾವ ಭಿತ್ತಿಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ
ನಂತರ ಸಂಜೆ ೬.೩೦ಕ್ಕೆ ಜನಮನ ಮೈಸೂರು ತಂಡದಿಂದ ತಮ್ಮ ನಿರ್ದೇಶನದಲ್ಲಿ ಮೂಲ ದೇವನೂರ ಮಹಾದೇವ ಅವರ ‘ ಸಂಬಂಜ ಅನ್ನೋದು ದೊಡ್ದು ಕನಾ’ ನಾಟಕ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು. ಪ್ರದೀಪ್, ಎಂ.ಎಸ್. ಖಲೀಂ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಮೈಸೂರು: ಒಬ್ಬರ ಜತೆ ಜೀವನ ಸಾಗಿಸದೆ ಅವರ ಕನಸುಗಳು ಹೀಗೇ ಇತ್ತೆಂದು ಹೇಗೆ ತಾನೇ ತಿಳಿಯಲು ಸಾಧ್ಯ. ಅಡ್ಡಂಡ ಸಿ.ಕಾಂಪ್ಪ ವಿರಚಿತ ‘ ಟಿಪ್ಪು ನಿಜ ಕನಸುಗಳು’ ಪುಸ್ತಕವನ್ನು ನಾನು ಓದಿzನೆ. ಆದರೆ ನಾಟಕ ನೋಡಿಲ್ಲ. ಆ ಪುಸ್ತಕದಲ್ಲಿ ನೂರಕ್ಕೆ ೯೯ .೯೯ ಭಾಗ ಸುಳ್ಳೇ ಇದೆ ಎಂದು ರಂಗಾಯಣ ಮಾಜಿ ನಿರ್ದೇಶಕ ಜನಾರ್ಧನ್ (ಜನ್ನಿ) ತಿಳಿಸಿದರು.

ಮಾಧ್ಯಮ ಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮೈಸೂರು ರಂಗಾಯಣ ಮಲೀನವಾದ ನಂತರ ನಾನು ಅಲ್ಲಿಂದ ದೂರವಾದೆ. ಅಂದಿನಿಂದ ಇಲ್ಲಿಯವರೆಗೂ ನಾನು ಅಲ್ಲಿಗೆ ಕಾಲು ಹಾಕಿಲ್ಲ. ಒಂದು ನಾಟಕವನ್ನು ನೋಡಲು ಪೋಲಿಸರ ಬಿಗಿ ಭದ್ರತೆಯೊoದಿಗೆ ಪ್ರೇಕ್ಷಕರನ್ನು ಒಳಗಡೆ ಬಿಟ್ಟು ನಡೆಸುವಂತಹ ಅವಶ್ಯಕತೆ ಇರಲಿಲ್ಲ. ಇಂಥಾ ಪರಿಸ್ಥಿತಿ ರಂಗಭೂಮಿಯ ಇತಿಹಾಸದಲ್ಲಿ ಎಂದು, ಎಲ್ಲೂ ನಡೆದಿಲ್ಲ. ಇಂಥಾ ಘಟನೆಗಳಿಂದ ರಂಗಭೂಮಿಯ ಸಂಸ್ಕೃತಿಗೆ ಅಪಚಾರವಾಗಿದೆ, ಭಾರಿ ಹೊಡೆತ ಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ರಂಗಭೂಮಿ ನಿರ್ದೇಶಕನಾಗಿ ಪೋಲಿಸರನ್ನು ನಾಟಕದ ಪ್ರೇಕ್ಷ ಕರಾಗಿ ಬನ್ನಿ ಅದರ ಹೊರತಾಗಿ ರಕ್ಷ ಣೆ ಕೊಡುವ ದೃಷ್ಟಿಯಿಂದ ಬರಬೇಡಿ ಎನ್ನುತ್ತಿದೆ.  ಆದರೆ ಈಗ ರಂಗಾಯಣವನ್ನು ಈ ಬಿಕ್ಕಟ್ಟಿನ ಪರಿಸ್ಥಿತಿಗೆ ತಂದು ನಿಲ್ಲಿಸಿzರೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರ ನಡೆಗೆ ಜನಾರ್ಧನ್ ಅಸಮಾಧಾನ ವ್ಯಕ್ತಪಡಿಸಿದರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!