ಹನೂರು: ಸೂಳೇರಿಪಾಳ್ಯ ಗ್ರಾಮಪಂಚಾಯಿತಿ ವ್ಯಾಪ್ತಿಯ ಆರನೇ ವಾರ್ಡ್ ಗೆ ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ಸದಸ್ಯ ಬಸವರಾಜು ಶಾಸಕ ಆರ್ ನರೇಂದ್ರ ಅವರಿಗೆ ಸನ್ಮಾನಿಸಿದರು.
ಈ ವೇಳೆ ನೂತನ ಗ್ರಾಪಂ ಸದಸ್ಯ ಬಸವರಾಜು ಮಾತನಾಡಿ ನನಗೆ ಬೆಂಬಲ ನೀಡಿರುವ ವಾರ್ಡ್ ನ ಜನತೆಗೆ ಅವಶ್ಯಕವಾದ ಸಿಸಿ ರಸ್ತೆ, ವಿದ್ಯುತ್ ದೀಪ, ಚರಂಡಿ,ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ದೊರಕಿಸುವಲ್ಲಿ ಮೊದಲ ಆದ್ಯತೆ ನೀಡುತ್ತೇನೆ. ಕಾಂಗ್ರೆಸ್ ಬೆಂಬಲಿತ ಸದಸ್ಯರೇ ಅಧ್ಯಕ್ಷರಾಗಿ ಇರುವುದರಿಂದ ನಮ್ಮ ವಾರ್ಡ್ ಗೆ ಹೆಚ್ಚಿನ ಆದ್ಯತೆ ನೀಡುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ಗ್ರಾಪಂ ಅಧ್ಯಕ್ಷೆ ಸುಧಾ, ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ಸಿಕಂದರ್ ಪಾಷಾ, ಮುಖಂಡರುಗಳಾದ ಕಾಂಚಳ್ಳಿ ನಟರಾಜು, ಮಹದೇವು,ಕುಮಾರ್, ನವೀನ್, ನಾಗರಾಜು, ಶಿವಕುಮಾರ್, ವೆಂಕಟಪ್ಪ, ಸುರೇಶ್ ,ಮಹದೇಶ್, ಜ್ಯೋತಿ ರಾಚಪ್ಪ, ಸೇರಿದಂತೆ ಇನ್ನಿತರರು ಹಾಜರಿದ್ದರು.



