ಹನೂರು :ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 126ನೇ ಜನ್ಮದಿನದ ಸ್ಮರಣಾರ್ಥ ಹನೂರಿನ ಮಹದೇಶ್ವರ ಕ್ರೀಡಾಂಗಣದಲ್ಲಿ 2023 ಜನವರಿ 20,21,ಹಾಗೂ 22ರಂದು ನೇತಾಜಿ ಕ್ರಿಕೆಟರ್ಸ್ ಮತ್ತು ಜಾ. ದಳ ಅಭ್ಯರ್ಥಿ ಎಂ ಆರ್ ಮಂಜುನಾಥ್ ರವರ ಸಹಯೋಗದಲ್ಲಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಹಮ್ಮಿಕೊಳ್ಳಲಾಗಿದೆ.
ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯುವ ಕ್ರಿಕೆಟರ್ಸ್ ಪ್ರತಿಭಾವಂತರಿಗೆ ಇದೊಂದು ಉತ್ತಮ ವೇದಿಕೆಯಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜನ್ಮದಿನ ಸ್ಮರಣಾರ್ಥ ನೇತಾಜಿ ಕ್ರಿಕೆಟರ್ಸ್ ವತಿಯಿಂದ ಕಳೆದ ಹತ್ತಾರು ವರ್ಷಗಳಿಂದ ಟೂರ್ನಮೆಂಟ್ ಆಯೋಜನೆ ಮಾಡಿಕೊಂಡು ಬಂದಿದ್ದು ಕಳೆದ ಎರಡು ವರ್ಷಗಳಿಂದ ಐಪಿಎಲ್ ಮಾದರಿಯಲ್ಲಿ ನೇತಾಜಿ ಪ್ರೀಮಿಯರ್ ಲೀಗ್ ಅನ್ನು ಆಯೋಜನೆ ಮಾಡಲಾಗಿದೆ.ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕ್ರಿಕೆಟ್ ಆಟಗಾರರಿಗೆ ಅವಕಾಶ ನೀಡುವ ಸಲುವಾಗಿ ಎಂಟು ತಂಡಗಳನ್ನಾಗಿ ಮಾಡಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಆಯೋಜನೆ ಮಾಡಲಾಗಿದ್ದು ಈ ಬಾರಿ ಮೂರನೇ ಆವೃತ್ತಿಯ ನೇತಾಜಿ ಪ್ರೀಮಿಯರ್ ಲೀಗ್ ನಡೆಯಲಿದೆ ಎಂದು ನೇತಾಜಿ ಕ್ರಿಕೆಟರ್ಸ್ ಮುಖ್ಯಸ್ಥ ಶಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9901598496 ಸಂಪರ್ಕಕಿಸುವಂತೆ ಕೋರಿದ್ದಾರೆ.





