Mysore
26
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ನ.7 ರಂದು ವಿವಿಧ ಸಮಾಜಗಳ ಸ್ವಾಮೀಜಿಗಳಿಗೆ ಗುರುವಂದನಾ ಕಾರ್ಯಕ್ರಮ

ಚಾಮರಾಜನಗರ: ಎಸ್ಸಿ, ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ಮಾಡಲು ಹೋರಾಟ ನಡೆಸಿದ ವಿವಿಧ ಸಮಾಜಗಳ ಸ್ವಾಮೀಜಿಗಳಿಗೆ  ನ.7 ರಂದು ಗುರುವಂದನೆ ಕಾರ್ಯಕ್ರಮವನ್ನು ಅಯೋಜಿಸಲಾಗಿದೆ ಎಂದು ತಾಲೂಕು ನಾಯಕ ವಿದ್ಯಾ ಕ್ಷೇಮಾಭಿವೃದ್ದಿ ಸಂಘದ ಉಪಾಧ್ಯಕ್ಷ ಪು.ಶ್ರೀನಿವಾಸ ನಾಯಕ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಅಂದು ಸ್ವಾಭಿಮಾನಿ ಎಸ್ಸಿ,ಎಸ್ಟಿ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ  ಜಿಲ್ಲಾ ಸಮಿತಿ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ  ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗಲಿದೆ ಎಂದರು.ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ 253 ದಿನಗಳ ಕಾಲ ಅಹೋರಾತ್ರಿ ನಡೆಸಿ  ಎಸ್ ಸಿಗೆ ಶೇ.17  ರಷ್ಟು ಮೀಸಲಾತಿ ಹೆಚ್ಚಳ,  ಎಸ್ಟಿ ಶೇ.7 ರಷ್ಡು ಮೀಸಲಾತಿ ಹೆಚ್ಚಳ ಮಾಡಿಸಿರುವ ಸಮುದಾಯದ ಶ್ರೀಪ್ರಸನ್ನಾನಂದಪುರಿಸ್ವಾಮಿ, ಜ್ಞಾನಪ್ರಕಾಶಸ್ವಾಮೀಜಿ, ಮಾದಾರಚೆನ್ನಯ್ಯಸ್ವಾಮಿಜೀ, ಸೇವಾಲಾಲ್  ಸ್ವಾಮೀಜಿ, ಕೇದಾರನಾಥಸ್ವಾಮೀಜಿ ಸೇರಿದಂತೆ 9 ಶ್ರೀಗಳಿಗೆ ಅಂದು  ಗುರು ವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಎಸ್ಸಿ,ಎಸ್ಟಿ ಸಮುದಾಯ ದವರು ಹೆಚ್ವಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯ ಕ್ರಮವನ್ನು ಯಶ್ವಸಿಗೊಳಿಸಿ ಕೊಡುವಂತೆ ಮನವಿ ಮಾಡಿದರು.

ಎಸ್ ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ ರಾಜ್ಯ ಸರ್ಕಾರ ಹಾಗೂ ಹೆಚ್ಚಳಕ್ಕೆ ಕಾರಣಕರ್ತರಾದ ವಿರೋಧಪಕ್ಷದವರಿಗೆ, ಜೆಡಿಎಸ್, ಬಿಎಸ್ಪಿ ಎಲ್ಲ ಪಕ್ಷದ ನಾಯಕರಿಗೆ ಈ ಮೂಲಕ ಅಭಿನಂದನೆ ಸಲ್ಲಿಸಲಾಗುವುದು ಎಂದರು.

ಗೋಷ್ಟಿಯಲ್ಲಿ ಮುಖಂಡರಾದ  ಕಪಿನಿನಾಯಕ, ನಗರಸಭಾ ಮಾಜಿ ಸದಸ್ಯ ಚೆಂಗುಮಣಿ, ಪರಶಿವಮೂರ್ತಿ, ಬಿಎಸ್ಪಿ ಜಿಲ್ಲಾ ಉಪಾಧ್ಯಕ್ಷ  ಬ್ಯಾಡಮೂಡ್ಲು ಬಸವಣ್ಣ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ